ಧರ್ಮಸ್ಥಳಕ್ಕೆ ಭಕ್ತರ ಪಾದಯಾತ್ರೆ

BIRUR darmastala
ಬೀರೂರಿನ ಗಣಪತಿ ಪೆಂಡಾಲ್ ಆವರಣದ ಶ್ರೀ ಶನೈಶ್ಚರ ಸ್ವಾಮಿ ದೇವಾಲಯದಲ್ಲಿ ಭಕ್ತರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡರು. ಪ್ರದೀಪ್, ಶ್ರೀನಿವಾಸ್, ಪ್ರದೀಪ್ ಸುಳ್ಳಪ್ಪ, ಅಭಿಲಾಷ್, ಲೋಕೇಶ್ ಇತರರಿದ್ದರು.
Published on

ಬೀರೂರು: ಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥನ ದರ್ಶನಕ್ಕೆ ಬೀರೂರಿನ ಹಲವಾರು ಭಕ್ತರು ಭಾನುವಾರ ಪಾದಯಾತ್ರೆ ಆರಂಭಿಸಿದರು.

ಗಣಪತಿ ಪೆಂಡಾಲ್ ಆವರಣದ ಶ್ರೀ ಶನೈಶ್ಚರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಯಾತ್ರೆ ಕೈಗೊಂಡರು. ಇಷ್ಟಾರ್ಥ ಸಿದ್ಧಿಗಾಗಿ ಹರಕೆ ತೀರಿಸಲು ಕೈಗೊಂಡಿರುವ ಯಾತ್ರೆಯಲ್ಲಿ ಉರಿ ಬಿಸಿಲನ್ನೂ ಲೆಕ್ಕಿಸದೆ ದಿನಕ್ಕೆ 30-40 ಕಿಮೀ ಕ್ರಮಿಸಲಿದ್ದಾರೆ. ಕಡೂರು, ಚಿಕ್ಕಮಗಳೂರು, ಮೂಡಿಗೆರೆ, ಕೊಟ್ಟಿಗೆಹಾರ, ಉಜಿರೆ ಮಾರ್ಗವಾಗಿ ಧರ್ಮಸ್ಥಳ ತಲುಪಲಿದ್ದಾರೆ.
ಪಟ್ಟಣದ ಅಜ್ಜಂಪುರ ರಸ್ತೆ, ಚೌಡೇಶ್ವರಿ ದೇವಸ್ಥಾನ ಬೀದಿ, ಇಂದಿರಾನಗರ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಹೊರಟಿದ್ದಾರೆ. ಅವರಿಗೆ ಬೇಕಾದ ವಸ್ತುಗಳನ್ನು ಸರಕು ಸಾಗಣೆ ವಾಹನದಲ್ಲಿ ಶೇಖರಿಸಿಕೊಳ್ಳಲಾಗಿದೆ.
ಪುರಸಭೆ ಸದಸ್ಯ ಬಿ.ಕೆ.ಶಶಿಧರ್ ಬೀಳ್ಗೊಟ್ಟರು. ಪ್ರದೀಪ್, ಶ್ರೀನಿವಾಸ್, ಪ್ರದೀಪ್ ಸುಳ್ಳಪ್ಪ, ಅಭಿಲಾಷ್, ಲೋಕೇಶ್, ಪ್ರಭಾವತಿ, ವಿಶಾಲಮ್ಮ, ಸವಿತಾ, ಅರ್ಪಿತಾ, ರಕ್ಷಿತಾ ಸೇರಿ 30ಕ್ಕೂ ಹೆಚ್ಚು ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net