ಭಕ್ತರಿಗೆ ಯಾತ್ರಿ ನಿವಾಸ ಅನುಕೂಲ

HKR YATRI
Published on

ಹಿರೇಕೆರೂರ: ದೇವಸ್ಥಾನದ ಆವರಣದಲ್ಲಿ ಸಮುದಾಯ ಭವನ ಮತ್ತು ಯಾತ್ರಿ ನಿವಾಸ ನಿರ್ಮಾಣದಿಂದ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ತಾಲೂಕಿನ ಉಜನಿಪುರ ಗ್ರಾಮದಲ್ಲಿ ಮಂಗಳವಾರ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಿರ್ಮಿಸಿದ ಯಾತ್ರಿ ನಿವಾಸದ ಉದ್ಘಾಟನೆ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸುತ್ತಿರುವ ಬಸ್ ತಂಗುದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಬಸ್ ತಂಗುದಾಣ ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ. ಯಾತ್ರಿ ನಿವಾಸ ಕಟ್ಟಡ ಭಕ್ತರಿಗೆ ಹಾಗೂ ಸಣ್ಣಪುಟ್ಟ ಸಭೆ, ಸಮಾರಂಭಗಳಿಗೆ ಉಪಯೋಗವಾಗಲಿದೆ ಎಂದರು.

ಮಂಜಪ್ಪ ಶಿಡಗನಾಳ, ಸಿದ್ದನಗೌಡ ಪಾಟೀಲ, ನಾಗರಾಜ ಸಿಂಗಾಪುರ, ಟಿ.ಬಿ. ಹುಡೇದ, ಈರಪ್ಪ ಬೇವಿನಹಳ್ಳಿ, ರುದ್ರಪ್ಪ ಪೂಜಾರ, ಮಂಜನಗೌಡ ಪಾಟೀಲ, ನಿಂಗಪ್ಪ ಕಾಯಕದ, ಉಜ್ಜಪ್ಪ ಶಿಡಗನಾಳ ಹಾಗೂ ಗ್ರಾಮಸ್ಥರು, ದೇವಸ್ಥಾನ ಕಮಿಟಿಯವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net