ಯಾತ್ರಿ ನಿವಾಸ ಭಕ್ತರಿಗೆ ಅನುಕೂಲ

pilgrim nivas useful for devotees
Published on

ಹಿರೇಕೆರೂರ: ದೇವಸ್ಥಾನದ ಆವರಣದಲ್ಲಿ ಸಮುದಾಯ ಭವನ ಮತ್ತು ಯಾತ್ರಿ ನಿವಾಸ ನಿರ್ವಣದಿಂದ ಭಕ್ತರಿಗೆ ಹೆಚ್ಚಿನ ಅನುಕೂಲಕರವಾಗಲಿದೆ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.

ತಾಲೂಕಿನ ಉಜನಿಪುರ ಗ್ರಾಮದಲ್ಲಿ ಮಂಗಳವಾರ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಿರ್ವಿುಸಿದ ಯಾತ್ರಿ ನಿವಾಸದ ಉದ್ಘಾಟನೆ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ವಿುಸುತ್ತಿರುವ ಬಸ್ ತಂಗುದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಬಸ್ ತಂಗುದಾಣ ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ. ಯಾತ್ರಿ ನಿವಾಸ ಕಟ್ಟಡ ಭಕ್ತರಿಗೆ ಹಾಗೂ ಸಣ್ಣಪುಟ್ಟ ಸಭೆ, ಸಮಾರಂಭಗಳಿಗೆ ಉಪಯೋಗವಾಗಲಿದೆ ಎಂದರು.

ಮಂಜಪ್ಪ ಶಿಡಗನಾಳ, ಸಿದ್ದನಗೌಡ ಪಾಟೀಲ, ನಾಗರಾಜ ಸಿಂಗಾಪುರ, ಟಿ.ಬಿ.ಹುಡೇದ, ಈರಪ್ಪ ಬೇವಿನಹಳ್ಳಿ, ರುದ್ರಪ್ಪ ಪೂಜಾರ, ಮಂಜನಗೌಡ ಪಾಟೀಲ, ನಿಂಗಪ್ಪ ಕಾಯಕದ, ಉಜ್ಜಪ್ಪ ಶಿಡಗನಾಳ ಹಾಗೂ ಗ್ರಾಮಸ್ಥರು, ದೇವಸ್ಥಾನ ಕಮಿಟಿಯವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net