ಚೇಳಾಯರು ರಸ್ತೆ ಇಕ್ಕೆಲಗಳಲ್ಲಿ ತ್ಯಾಜ್ಯ ರಾಶಿ

New Project (1)
Published on

ಹಳೆಯಂಗಡಿ: ಪಾವಂಜೆ ಸೇತುವೆ ಬಳಿಯಿಂದ ಚೇಳಾಯರು ಕ್ರಾಸ್ ಒಳಗಡೆ ಹೋಗುವ ರಸ್ತೆ ಇಕ್ಕೆಲಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ರಾಶಿ ಕಾಣಸಿಗುತ್ತಿದ್ದು ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ.

ಪಾವಂಜೆ ಸೇತುವೆ ಬಳಿಯಿಂದ ಚೇಳಾಯರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಧಾನ ರಸ್ತೆ ಖಂಡಿಗೆ ಸೇತುವೆವರೆಗೆ ಕೆಲ ದುಷ್ಕರ್ಮಿಗಳು ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುತ್ತಿದ್ದಾರೆ. ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ತಂದ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿಯೇ ಹಾಕಿ ಹೋಗುತ್ತಿದ್ದು ಪ್ರಾಣಿಗಳು ಅಲ್ಲಿಂದ ರಸ್ತೆಗೆ ಎಳೆದು ತಂದು ಹಾಕುತ್ತಿರುವುದು ಸಮಸ್ಯೆಯಾಗಿದೆ.

ಈ ಭಾಗದಲ್ಲಿ ರಸ್ತೆ ಅಪಾಯಕಾರಿ ತಿರುವುಗಳಲ್ಲಿ ವಾಹನ ಸಂಚಾರ ಎಚ್ಚರಿಕೆ ಅಳವಡಿಸಿದ್ದ ದರ್ಪಣದ ಬಳಿ ಹುಲ್ಲಿನ ಪೊದೆ ಆವರಿಸಿದ್ದು ವಾಹನ ಸಂಚಾರ ಮತ್ತಷ್ಟು ಅಪಾಯಕಾರಿಯಾಗಿದೆ. ಕೂಡಲೇ ಸಂಬಂಧಿತ ಅಧಿಕಾರಿಗಳು ಎಚ್ಚೆತ್ತು, ಈ ಭಾಗದಲ್ಲಿ ತ್ಯಾಜ್ಯ ಬಿಸಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ರಸ್ತೆ ಬದಿಯಲ್ಲಿ ಆವರಿಸಿರುವ ಹುಲ್ಲಿನ ಪೊದೆಗಳನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net