

ನರಗುಂದ: ಮಹದಾಯಿ ನೀರು ಬಳಕೆಗೆ ಪರಿಸರ ಇಲಾಖೆ ಪರವಾನಗಿ ನೀಡಲು ಅಡ್ಡಿ ಉಂಟು ಮಾಡುತ್ತಿರುವ ಬಗ್ಗೆ ಸ್ಪಷ್ಟನೆ ಕೋರಿ ಕೇಂದ್ರ ಅರಣ್ಯ, ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ ವಿರುದ್ಧ ಸುಪ್ರೀಂಗೆ ಪಿಐಎಲ್ ಸಲ್ಲಿಸಲಾಗಿದೆ ಎಂದು ರೈತಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.
ಮಹದಾಯಿ, ಕಳಸಾ-ಬಂಡೂರಿ ನದಿ ಜೋಡಣೆಗೆ ಆಗ್ರಹಿಸಿ ಪಟ್ಟಣದಲ್ಲಿ ಮಂಗಳವಾರ ನಡೆದ 3558ನೇ ದಿನದ ನಿರಂತರ ಹೋರಾಟ ವೇದಿಕೆಯಲ್ಲಿ ಅವರು ಮಾತನಾಡಿ, ಮಹದಾಯಿ ಯೋಜನೆಗೆ ಅನುಮತಿ ನೀಡುವಂತೆ ಕೇಂದ್ರ ಜಲಸಂಪನ್ಮೂಲ, ವನ್ಯಜೀವಿ, ಅರಣ್ಯ ಮತ್ತು ಪರಿಸರ ಇಲಾಖೆ ಸಚಿವರು, ಇಲಾಖೆ ಅಧಿಕಾರಿಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೂ ರಾಜ್ಯ ಸರ್ಕಾರದಿಂದ ಈಗಾಗಲೇ ಲಿಖಿತ ಮನವಿ ಮಾಡಲಾಗಿದೆ. ಆದರೆ, ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿದೆ ಎಂಬ ನೆಪವೊಡ್ಡಿ ಬಿಜೆಪಿ ನಾಯಕರು ಕಾಲಹರಣ ಮಾಡುತ್ತಿದ್ದಾರೆ ಎಂದರು.
ಮಹದಾಯಿ ಕುಡಿಯುವ ನೀರಿನ ವಿಷಯದಲ್ಲಿ ಕ್ಷುಲ್ಲಕ ರಾಜಕೀಯ ತಾರತಮ್ಯ ಮಾಡುತ್ತಿರುವ ಕೇಂದ್ರದ ನಡೆ ಖಂಡಿಸಿ ಪಂಜಾಬ್, ಹರಿಯಾಣ, ಛತ್ತೀಸ್‌ಗಡ ರೈತರ ಸಹಯೋಗದೊಂದಿಗೆ ರಾಷ್ಟ್ರಪತಿ ಭವನದ ಎದುರು ರೈತರ ಬೃಹತ್ ಪರೇಡ್ ನಡೆಸಲಾಗುವುದು ಎಂದರು.
ಈರಬಸಪ್ಪ ಹೂಗಾರ, ಎಸ್.ಬಿ. ಜೋಗಣ್ಣವರ, ಸುಭಾಷ್ ಗಿರಿಯನ್ನವರ, ಮಲ್ಲಣ್ಣ ಅಲೇಕಾರ, ಹನುಮಂತ ಸರನಾಯ್ಕರ್, ಅರ್ಜುನ ಮಾನೆ, ವಿಜಯಕುಮಾರ ಹೂಗಾರ, ವಾಸು ಚವ್ಹಾಣ, ಬಸವರಾಜ ತೆಗ್ಗಿನಮನಿ, ಎಸ್.ಎಸ್. ಹಿರೇಮಠ, ಪರಮೇಶಪ್ಪ ಅಣ್ಣಿಗೇರಿ, ಬಸಪ್ಪ ಹಾಲವರ, ಯಲ್ಲಪ್ಪ ತಳವಾರ