

ಕಾರವಾರ: ಜನಸ್ನೇಹಿಯಾಗಿದ್ದ ಕಾಡು ಹಂದಿಯನ್ನು ನಾಡ ಬಾಂಬ್ ಇಟ್ಟು ಸಾಯಿಸಿದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಅಮದಳ್ಳಿಯ ಸೀಫ್ರನ್ ಥಾಮಸ್ ಫರ್ನಾಂಡಿಸ್ ಬಂಧಿತ ವ್ಯಕ್ತಿ.
ಚೆಂಡಿಯಾದಲ್ಲಿ ಕಾಡು ಹಂದಿಯೊಂದು ಕೆಲ ದಿನಗಳಿಂದ ಜನ ಸ್ನೇಹ ಬೆಳೆಸಿತ್ತು.
ಇದನ್ನೂ ಓದಿ: ಸೌಜನ್ಯ ಗೌಡ ಕೊಲೆ ಪ್ರಕರಣದ ಮರು ತನಿಖೆ ನಡೆಸಿ
ದನಗಳ ಜತೆ ಮನೆಗಳಿಗೆ ಬಂದು ಅವರು ಕೊಟ್ಟ ತಿಂಡಿ ತಿನ್ನುತ್ತಿತ್ತು. ಕಾಂತಾರ ಚಿತ್ರ ಪ್ರಸಿದ್ಧವಾದ ನಂತರ ಹಂದಿ ಬಗ್ಗೆ ವಿಶೇಷ ಪ್ರೀತಿ ಬಂದಿತ್ತು.
ಆದರೆ, ಶುಕ್ರವಾರ ರಾತ್ರಿ ಮಾಂಸದಲ್ಲಿ ನಾಡ ಬಾಂಬ್ ಇಡಲಾಗಿದ್ದು , ಅದನ್ನು ಜಗಿದ ಹಂದಿ ಮೃತಪಟ್ಟಿದೆ.
ಜನರ ದೂರಿನ ಮೇರೆಗೆ ಆರ್ ಎಫ್ ಒ ರಾಘವೇಂದ್ರ ಹಾಗೂ ತಂಡ ಆರೋಪಿಯನ್ನು ಬಂಧಿಸಿದೆ.