ಮಂಗಳೂರು: ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಅರ್ಪಿಸುವ ವೀಣಾ ಶೆಟ್ಟಿಯವರ ಲೇಖನಗಳ ಸಂಗ್ರಹ ಗೋಡೆಯ ಮೇಲಿನ ಚಿತ್ತಾರ ಪುಸ್ತಕ ಬಿಡುಗಡೆ ಸಮಾರಂಭವು ಜುಲೈ 8 ರಂದು ಸೋಮವಾರ ಸಂಜೆ 5 ಗಂಟೆಗೆ ಕೆನರಾ ಪದವಿ ಕಾಲೇಜು ಶತಮಾನೋತ್ಸವ ಸಭಾಂಗಣದಲ್ಲಿ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ರಂಗ ಸಂಗಾತಿಯ ಅಧ್ಯಕ್ಷ ಗೋಪಾಕೃಷ್ಣ ಶೆಟ್ಟಿ ವಹಿಸಲಿದ್ದಾರೆ. ಪುಸ್ತಕ ಬಿಡುಗಡೆಯನ್ನು ಖ್ಯಾತ ಬರಹಗಾರ್ತಿ, ಅನುವಾದಕರಾದ ಡಾ ಪಾರ್ವತಿ ಜಿ ಐತಾಳ್ ಮಾಡಲಿದ್ದಾರೆ. ಚಿಂತಕ, ವಾಗ್ಮಿ ಡಾ ಅರುಣ್ ಉಳ್ಳಾಲ್ ಪುಸ್ತಕ ಪರಿಚಯ ಮಾಡಲಿದ್ದಾರೆ. ರಂಗಕರ್ಮಿ, ಸಾಹಿತಿ ಶಶಿರಾಜ್ ರಾವ್ ಕಾವೂರು ಕಾರ್ಯಕ್ರಮ ನಿರ್ವಹಿಸಲಿದ್ದಾರೆ.