ಹುಬ್ಬಳ್ಳಿಯಲ್ಲಿ ಸಂಕ್ರಾಂತಿ ಸಂಭ್ರಮ, ಪಿಕ್ನಿಕ್ ತಾಣಗಳಲ್ಲಿ ನೂಕುನುಗ್ಗಲು

Published on

ಹುಬ್ಬಳ್ಳಿ: ಮಕರ ಸಂಕ್ರಮಣದ ನಿಮಿತ್ತ ಭಾನುವಾರ ನಗರದಲ್ಲಿ ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ರಜಾ ದಿನವಾಗಿದ್ದರಿಂದ ಅನೇಕ ಜನರು ಮನೆಯಿಂದ ಹೊರಗೆ ಬುತ್ತಿ ಕಟ್ಟಿಕೊಂಡು ಹೋಗಿ ಸಹ ಭೋಜನ ಸವಿದರು.

ನಗರದ ತೋಳನಕೆರೆ, ಉಣಕಲ್ಲ ಉದ್ಯಾನ, ನೃಪತುಂಗ ಬೆಟ್ಟ, ಇಂದಿರಾ ಗಾಜಿನಮನೆ ಆವರಣ ಹೀಗೆ ಪಿಕ್ನಿಕ್ ತಾಣಗಳು ಜನದಟ್ಟಣೆಯಿಂದ ಕೂಡಿದ್ದವು. ಕುಟುಂಬದ ಸದಸ್ಯರು, ಸ್ನೇಹಿತರು ಸೇರಿ ಸಹಭೋಜನ ಮಾಡಿದರು.

ಸಂಕ್ರಾಂತಿ ವಿಶೇಷ ಖಾದ್ಯಗಳಾದ ಹೋಳಿಗೆ, ಜೋಳ, ಸಜ್ಜಿ ರೊಟ್ಟಿ, ಕೆಂಪು ಚಟ್ನಿ, ಶೇಂಗಾ, ಎಳ್ಳು ಹೋಳಿಗೆ, ಉಂಡಿ, ಜೋಳದ ಕಡಬು, ಕರ್ಚಿಕಾಯಿ, ಹಪ್ಪಳ, ಸಂಡಿಗೆ, ಕರಿದ ಮೆಣಸಿನಕಾಯಿ, ಮಸಾಲೆ ಅನ್ನ ಮುಂತಾದವುಗಳನ್ನು ತೆಗೆದುಕೊಂಡು ಬಂದಿದ್ದ ಜನರು ಎಲ್ಲರೂ ಸೇರಿ ಸವಿಯುವ ಮೂಲಕ ಊಟದ ಮಜಾ ಹೆಚ್ಚಿಸಿದರು.

ತೋಳನಕೆರೆ, ಉಣಕಲ್ಲ ಉದ್ಯಾನ ಮುಂತಾದೆಡೆ ಜಾಗ ಇಲ್ಲದೇ ಅನೇಕರು ಪರದಾಡಿದರು. ಸಂಜೆ ವೇಳೆ ಇನ್ನಷ್ಟು ಜನರು ಸೇರಿದ್ದರಿಂದ ನೂಕುನುಗ್ಗಲು ಉಂಟಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net