ಆರೋಪಿಗಳ ಪತ್ತೆಯಾದರೂ ಕಳವಾದ ಪಿಕಪ್ ಪತ್ತೆಯಿಲ್ಲ!

FB_IMG_1697304031133
Published on

ವಿಟ್ಲ: ಕುಡ್ತಮುಗೇರು ಎಂ. ಎಚ್. ಶಾಮಿಯಾನ ಶಾಮಿಯಾನ ಮಾಲಕಕೊಬ್ಬರಿಗೆ ಸೇರಿದ ಪಿಕ್‌ ಅಪ್‌ ವಾಹನ ಕಳವು ಪ್ರಕರಣದ 8ಮಂದಿ ಆರೋಪಿಗಳನ್ನು ಬಂಧಿಸಿದ ಪೊಲೀಸರು ವಾಹನ ಪತ್ತೆ ಮಾಡುವಲ್ಲಿ ವಿಫಲರಾಗಿದ್ದಾರೆ.

ಕೇರಳ ಮೂಲದ ರಂಷನ್ ಯಾನೆ ಸಾನು, ಜುನ್ಸಿಫ್, ನೌಫಲ್, ಹಂಸಕ್, ತಬ್ರಿಜ, ಮೊಹಮ್ಮದ್ ಉಸೈನ್, ಹ್ಯಾರಿಸ್, ಮೊಹಮ್ಮದ್ ಅಯೂಬ ಖಾನ್ ಎಂಬುವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸೆ. 23 ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಡ್ತಮುಗೇರಲ್ಲಿ ಶಾಮಿಯಾನ ಸಾಮಾಗ್ರಿಯ ಜತೆಗೆ ನಿಲ್ಲಿಸಿದ್ದ ವಾಹನವನ್ನು ಕಳವುಗಯ್ಯಲಾಗಿದ್ದು, ಗೋಣಿಕೊಪ್ಪದಲ್ಲಿ ಅಗೋಚರವಾದ ಪಿಕಪ್ ಎಲ್ಲಿ ಎಂಬುದು ಇನ್ನೂ ಪತ್ತೆಯಾಗಿಲ್ಲ.

ಗೋಣಿಕೊಪ್ಪದ ಗುಜುರಿ ಅಂಗಡಿಯಿಂದ ಶಾಮಿಯಾನದ ಪಿಕಪ್ ನಲ್ಲಿದ್ದ ಟಿನ್ ಶೀಟ್ ಹಾಗೂ ಕಬ್ಬಿಣದ ಪೈಪ್ ಗಳನ್ನು ಹಿಂದಿರುಗಿಸಿದ್ದಾರೆ. 2015ಮಾಡೆಲ್ ನ 8ಲಕ್ಷ ಮೌಲ್ಯದ ಪಿಕಪ್ ವಾಹನವನ್ನು ಏನು ಮಾಡಿದರೆಂಬ ಕುರುಹು ಪತ್ತೆ ಹಚ್ಚುವಲ್ಲಿ ಪೋಲೀಸ್ ಇಲಾಖೆ ವಿಫಲವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net