ಬಸ್-ಪಿಕಪ್ ಮುಖಾಮುಖಿ ಡಿಕ್ಕಿಯಾಗಿ ಪಿಕಪ್ ಚಾಲಕ ಸಾವು

driver
Published on

ಕಾರ್ಕಳ: ತಾಲೂಕಿನ ಹಿರ್ಗಾನದ ದುಗ್ಗನರಾಯ ಚಡವು ಎಂಬಲ್ಲಿ ಸೋಮವಾರ ರಾತ್ರಿ ಖಾಸಗಿ ಬಸ್ ಹಾಗೂ ಪಿಕಪ್ ಮುಖಾಮುಖಿ ಡಿಕ್ಕಿ ಹೊಡೆದು ಪಿಕಪ್ ಚಾಲಕ ನೆಲ್ಲಿಕಟ್ಟೆ ನಿವಾಸಿ ಸಂತೋಷ್ ನಾಯಕ್ ಎಂಬುವರು ಮೃತಪಟ್ಟಿದ್ದಾರೆ.

ಹೆಬ್ರಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್, ಹಿರ್ಗಾನದಿಂದ ನೆಲ್ಲಿಕಟ್ಟೆ ಕಡೆಗೆ ಬರುತಿದ್ದ ಪಿಕ್‌ಅಪ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಬಸ್ ಚಾಲಕನ ವೇಗದ ಚಾಲನೆ ಅವಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net