ಪಿಕಾರ್ಡ್ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ

ಪಿಕಾರ್ಡ್ ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಎಸ್.ಟಿ.ಕೇಶವಮೂರ್ತಿ, ನೆಲಮನೆ ಶಂಕರೇಗೌಡ, ಬಲ್ಲೇನಹಳ್ಳಿ ಸಂತೋಷ್ ನಾಮಪತ್ರ ಸಲ್ಲಿಸಿದರು.
ಪಿಕಾರ್ಡ್ ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಎಸ್.ಟಿ.ಕೇಶವಮೂರ್ತಿ, ನೆಲಮನೆ ಶಂಕರೇಗೌಡ, ಬಲ್ಲೇನಹಳ್ಳಿ ಸಂತೋಷ್ ನಾಮಪತ್ರ ಸಲ್ಲಿಸಿದರು.
Published on

ಶ್ರೀರಂಗಪಟ್ಟಣ: ಪಟ್ಟಣದ ತಾಲೂಕು ಪ್ರಾಥಮಿಕ ಸಹಾಕರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ತಾಲೂಕಿನ ವಿವಿಧ ಕ್ಷೇತ್ರಗಳಿಂದ ಸಾಕಷ್ಟು ಷೇರುದಾರರು ಅಂತಿಮ ದಿನವಾದ ಶುಕ್ರವಾರ ನಾಮಪತ್ರ ಸಲ್ಲಿಸಿದರು.

ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 534 ಷೇರುದಾರರಿದ್ದು, ಒಟ್ಟು 14 ನಿರ್ದೇಶಕರ ಸ್ಥಾನಗಳಿವೆ. ಆದರೆ ಈ ಪೈಕಿ ಸಾಲ ಪಡೆಯದವರ ಕ್ಷೇತ್ರದ 1 ಸ್ಥಾನ ಎಸ್.ಟಿ.ಪಂಗಡಕ್ಕೆ ಮೀಸಲಿದ್ದು, ಪ್ರಸ್ತುತ ಬ್ಯಾಂಕ್‌ನಲ್ಲಿ ಆ ಸಮುದಾಯದ ಷೇರುದಾರರಿದ ಕಾರಣ 13 ನಿರ್ದೇಶಕರ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯುತ್ತಿದೆ.

ಸಾಲ ಪಡೆಯದವರ ಹಾಗೂ ಸಾಲ ಪಡೆದವರ ಕ್ಷೇತ್ರಗಳಾದ ಅರಕೆರೆ ಹೋಬಳಿಯ-1,2,3, ಕೆ.ಶೆಟ್ಟಹಳ್ಳಿ ಹೋಬಳಿಯ- 1,2,3, ಕಸಬಾ ಹೋಬಳಿ-1,2,3 ಹಾಗೂ ಬೆಳಗೊಳ ಹೋಬಳಿ- 1,2,3 ರಿಂದ ಒಟ್ಟು 32 ಷೇರುದಾರರು ನಾಮಪತ್ರ ಸಲ್ಲಿಸಿದ್ದು, ಅಂತಿಮ ದಿನದಂದು 18 ನಾಮಪತ್ರ ಸಲ್ಲಿಕೆಯಾಗಿವೆ.

ಜ.18ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, 19ರಂದು ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ. 25ರಂದು ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂದು ಬೆಳಗ್ಗೆ 9 ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಷೇರುದಾರರು ಕಡ್ಡಾಯವಾಗಿ ಗುರುತಿನ ಕಾರ್ಡ್ ತೋರಿಸಿ ಮತ ಚಲಾಯಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net