ರೈತರ ಹಿತ ಕಾಪಾಡಲು ಬದ್ಧ

Untitled design (3)
ಗಂಗಾವತಿ ತಾಲೂಕಿನ ಪ್ರತಿಷ್ಠಿತ ಪಿಕಾರ್ಡ್ ಬ್ಯಾಂಕ್‌ಗೆ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ದೊಡ್ಡಪ್ಪ ಲಕ್ಷ್ಮಣರಾವ್ ದೇಸಾಯಿ ಹಗೇದಾಳ್, ಉಪಾಧ್ಯಕ್ಷ ಜನಗಂಡಪ್ಪ ನಾಗಪ್ಪ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ನಿರ್ದೇಶಕರಾದ ಶರಣೇಗೌಡ ಮಾಲಿ ಪಾಟೀಲ್, ಪಂಪನಗೌಡ, ಬಸವರಾಜ ಹಳ್ಳಿ ಇತರರಿದ್ದರು.
Published on

ಗಂಗಾವತಿ: ತಾಲೂಕಿನ ಪ್ರತಿಷ್ಠಿತ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ ದೊಡ್ಡಪ್ಪ ಲಕ್ಷ್ಮಣರಾವ್ ದೇಸಾಯಿ ಹಗೇದಾಳ್ , ಉಪಾಧ್ಯಕ್ಷರಾಗಿ ಸಿದ್ದಾಪುರಿನ ಜನಗಂಡಪ್ಪ ನಾಗಪ್ಪ ಪೂಜಾರಿ ಅವಿರೋಧ ಶನಿವಾರ ಆಯ್ಕೆಯಾದರು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸ್ಥಾನದಲ್ಲಿ ಹ್ಯಾಟ್ರಿಕ್ ಸಾಧನೆ

ಸುವರ್ಣ ಮಹೋತ್ಸವ ಆಚರಿಸಿಕೊಂಡ ಪಿಕಾರ್ಡ್ ಬ್ಯಾಂಕ್‌ನ ಐದು ವರ್ಷದ ಅಡಳಿತಾವಧಿಗೆ ಈ ಹಿಂದೆ ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸಾಲಗಾರರ ಸಾಮಾನ್ಯ ಮತಕ್ಷೇತ್ರದಿಂದ ದೊಡ್ಡಪ್ಪ ಲಕ್ಷ್ಮಣರಾವ್ ದೇಸಾಯಿ, ಉಪಾಧ್ಯಕ್ಷ ಸ್ಥಾನಕ್ಕೆ ಸಾಲಗಾರರ ಸಾಮಾನ್ಯ ಕ್ಷೇತ್ರದ ಸಿದ್ದಾಪುರದ ಜನಗಂಡಪ್ಪ ನಾಗಪ್ಪ ಪೂಜಾರಿ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಬಸಪ್ಪ ಗಾಳಿ ೋಷಿಸಿದರು.

ಸತತ ಮೂರು ಬಾರಿ ಗೆಲುವು: ಹಲವು ವರ್ಷಗಳಿಂದ ನಿರ್ದೇಶಕರಾಗಿರುವ ದೊಡ್ಡಪ್ಪ ದೇಸಾಯಿ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. 2013, 2018 ಮತ್ತು2023ರಲ್ಲೂ ಅವಿರೋಧ ಆಯ್ಕೆಯಾಗಿದ್ದು ಗಮನಾರ್ಹ. ಇದೆ ಬ್ಯಾಂಕ್‌ಗೆ ಅವರ ತಂದೆ ಲಕ್ಷ್ಮಣರಾವ್ ದೇಸಾಯಿ ಒಂದು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಅಧ್ಯಕ್ಷ ದೊಡ್ಡಪ್ಪ ದೇಸಾಯಿ ಮಾತನಾಡಿ, ರೈತರ ಹಿತಾಸಕ್ತಿ ಅನುಗುಣ ಯೋಜನೆ ರೂಪಿಸಲಾಗುತ್ತಿದ್ದು, ಸಾಲ ವಿತರಣೆಯೊಂದಿಗೆ ಅರ್ಥಿಕ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು. ನಿರ್ದೇಶಕರಾದ ಶರಣೇಗೌಡ ಮಾಲಿ ಪಾಟೀಲ್, ಪಂಪನಗೌಡ, ಬಸವರಾಜ ಹಳ್ಳಿ, ಹನುಮಂತಪ್ಪ, ರಮೇಶ ಮಾನಪ್ಪ ನಾಯಕ, ರತ್ನಮ್ಮ ಬೀರಪ್ಪ ನರಿ, ವೀರೇಶಪ್ಪ, ಚನ್ನಮ್ಮ, ಯಂಕಮ್ಮ, ಉಮಾದೇವಿ ಸೇರಿ ಸಿಬ್ಬಂದಿ ವರ್ಗದವರಿದ್ದರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net