ಅಂಗವಿಕಲರಿಗೆ ಫಿಜಿಯೋಥೆರಪಿ ಸಹಕಾರಿ

FotoJet
Published on

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಅಭಿಮತ

ಶಿರಾ: ಪ್ರತಿ ಮಗುವೂ ಬೆಳೆಯಲು, ಕಲಿಯಲು ಮತ್ತು ನತೆಯಿಂದ ಬದುಕಲು ಅವಕಾಶ ದೊರೆಯಬೇಕು. ಅಂಗವಿಕಲ ಮಕ್ಕಳಿಗೆ ಸವಾಲಾಗಿರುವ ಚಲನೆ ಮತ್ತು ಸ್ವಾತಂತ್ರ್ಯ ನಿಭಾಯಿಸುವಲ್ಲಿ ಫಿಜಿಯೋಥೆರಪಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.

ತಾಲೂಕಿನ ಕಳ್ಳಂಬೆಳ್ಳದ ಪಿಎಂಶ್ರೀ ಸರ್ಕಾರಿ ವಾದರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವಿಶ್ವ ಫಿಜಿಯೋಥೆರಪಿ ದಿನಾಚರಣೆ ಅಂಗವಾಗಿ ಮೊಬಿಲಿಟಿ ಇಂಡಿಯಾ ಹಾಗೂ ಶಾಲಾ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಉಚಿತ ಫಿಜಿಯೋಥೆರಪಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಮೊಬಿಲಿಟಿ ಇಂಡಿಯಾ ಸಂಸ್ಥೆಯು ಕಳ್ಳಂಬೆಳ್ಳದಲ್ಲಿ ಉಚಿತ ಫಿಜಿಯೋಥೆರಪಿ ಕೇಂದ್ರವನ್ನು ಆರಂಭಿಸಲಾಗಿದೆ. ಈ ಚಿಕಿತ್ಸೆಯು ನೋವನ್ನು ಕಡಿಮೆ ವಾಡುತ್ತದೆ. ಸಂಭವನೀಯ ತೊಡಕುಗಳನ್ನು ತಡೆಯುತ್ತದೆ ಹಾಗೂ ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಿಯಮಿತ ಚಿಕಿತ್ಸೆಯೊಂದಿಗೆ ಅನೇಕ ಮಕ್ಕಳು ದೈನಂದಿನ ಚಟುವಟಿಕೆಗಳನ್ನು ಹೆಚ್ಚು ಸುಲಭವಾಗಿ ನಿರ್ವಹಿಸಬಹುದಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ವಾತನಾಡಿ, ಅಂಗವಿಕಲ ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ ಕಲಿಕೆಯನ್ನು ಮುಂದುವರಿಸಲು ಸೂಕ್ತ ಚಿಕಿತ್ಸೆ ಹಾಗೂ ಪರಿಕರಗಳ ಅಗತ್ಯವಿದೆ. ಅದನ್ನು ವ್ಯವಸ್ಥೆ ವಾಡುವಲ್ಲಿ ಮೊಬಿಲಿಟಿ ಇಂಡಿಯಾ ಸಂಸ್ಥೆ ಸಿರಾ ತಾಲೂಕಿನಲ್ಲಿ ಉತ್ತಮ ಕೆಲಸವಾಡಲಿ ಎಂದರು.

ಮೊಬಿಲಿಟಿ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಆನಂದ್ ವಾತನಾಡಿ, ಫಿಜಿಯೋಥೆರಪಿಸ್ಟ್‌ಗಳು ಮನೆಯಲ್ಲಿ ಅಭ್ಯಾಸ ವಾಡಬಹುದಾದ ವ್ಯಾಯಾಮಗಳನ್ನು ಕಲಿಸುವ ಮೂಲಕ ಅಂಗವಿಕಲರ ಕುಟುಂಬಗಳನ್ನು ಬೆಂಬಲಿಸುತ್ತಾರೆ. ಮಕ್ಕಳ ಪ್ರಗತಿಯನ್ನು ಖಚಿತಪಡಿಸಿಕೊಳ್ಳುತ್ತಾರೆ. ಪುನರ್ವಸತಿ ಎಂದರೆ ದೇಹಕ್ಕೆ ಚಿಕಿತ್ಸೆ ನೀಡುವುದು ವಾತ್ರವಲ್ಲ, ಇದು ಮಕ್ಕಳಿಗೆ ತಮ್ಮ ಪೂರ್ಣ ಸಾಮರ್ಥ್ಯವನ್ನು ಸಾಧಿಸಲು ಮತ್ತು ತೃಪ್ತಿಕರ ಜೀವನನಡೆಸಲು ಅವಕಾಶ ನೀಡುವುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಶ್ವ ಫಿಜಿಯೋಥೆರಪಿ ದಿನಾಚರಣೆ ಹಿನ್ನೆಲೆ ಫಿಜಿಯೋಥೆರಪಿಸ್ಟ್‌ಗಳನ್ನು ಸನ್ಮಾನಿಸಲಾಯಿತು. ಅಂಗವಿಕಲ ಮಕ್ಕಳ ಪಾಲಕರಿಗೆ ಪರಿಕರಗಳು ಹಾಗೂ ನಿರಾಮಯ ಕಾರ್ಡ್‌ಗಳನ್ನು ವಿತರಣೆ ವಾಡಲಾಯಿತು.

ಕಾರ್ಯಕ್ರಮದಲ್ಲಿ ಕಳ್ಳಂಬೆಳ್ಳ ಹೋಬಳಿಯ ವಿವಿಧ ಗ್ರಾಮಗಳ ಅಂಗವಿಕಲ ಮಕ್ಕಳು, ಪಾಲಕರು, ಶಾಲಾ ಶಿಕ್ಷಣ ಇಲಾಖೆಯ ಸಮನ್ವಯ ಶಿಕ್ಷಣ ಅಧಿಕಾರಿಗಳು, ಪಿಎಂಶ್ರೀ ಸರ್ಕಾರಿ ವಾದರಿ ಪ್ರಾಥಮಿಕ ಪಾಠಶಾಲೆಯ ಮುಖ್ಯಶಿಕ್ಷಕ ಅನಿಲ್ ಕುವಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net