

ಚಿಕ್ಕೋಡಿ: ಡಾ.ಸಂಜಯ ಪಾಟೀಲ ದಂಪತಿ ನೇತೃತ್ವದ ಚಿಕ್ಕೋಡಿಯಲ್ಲಿರುವ ೨೦ ಹಾಸಿಗೆಯುಳ್ಳ ಆಸ್ಪತ್ರೆ ಇಂದು ೧೦೦ ಹಾಸಿಗೆಗಳ ಆಸ್ಪತ್ರೆಯಾಗಿ ರೂಪುಗೊಂಡಿದ್ದು ರೋಗಿಗಳಿಗೆ ಆಶ್ರಯ ನೀಡಲಿದೆ ಎಂದು ಚಿಂಚಣಿ ಸಿದ್ಧಸಂಸ್ಥಾನ ಮಠದ ಉತ್ತರಾಧಿಕಾರಿ ಶಿವಪ್ರಸಾದ ಸ್ವಾಮೀಜಿ ಹೇಳಿದರು.
ಸಮೀಪದ ಕುಪ್ಪಾಣಿವಾಡಿ ಗ್ರಾಮದ ಶ್ರೀ ೧೦೮ ಆಚಾರ್ಯ ರತ್ನ ದೇಶಭೂಷಣ ಆರೋಗ್ಯ ಧಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಿ.ಎಚ್.ಆರೋಗ್ಯ ಸೊಸೈಟಿಯ ನೂತನವಾದ ದಿಯಾ ಫಿಜಿಯೋಥೆರಪಿ ಮತ್ತು ದಿಯಾ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜುಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಆಧುನಿಕ ಯುಗದಲ್ಲಿ ಫಿಜಿಯೋಥೆರಪಿ ಅವಶ್ಯವಿದೆ ಎಂದರು.
ಕೊಲ್ಲಾಪುರ ಸಂಸ್ಥಾನ ಮಠದ ಸ್ವಸ್ತಿ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮಾತನಾಡಿದರು.
ಪದ್ಮಾಕರ ಪಾಟೀಲ, ಡಿ.ಎಚ್.ಆರೋಗ್ಯ ಸೊಸೈಟಿ ಅಧ್ಯಕ್ಷ ಡಾ.ಸಂಜೀವ ಪಾಟೀಲ, ಕಾರ್ಯದರ್ಶಿ ಡಾ.ಸಂಧ್ಯಾ ಪಾಟೀಲ, ಬಿ.ಎ.ಬೋಜಕರ, ವಕೀಲ ಎಸ್.ಟಿ.ಮುಮ್ಮೊಳ್ಳಿ, ವರ್ಧಮಾನ ಸದಲಗೆ, ಸುನೀಲ ಮಡ್ಡಿ, ಪ್ರೀತಿ ಸೊಲ್ಲಾಪೂರೆ ಇತರರಿದ್ದರು.
ವಿದ್ಯಾರ್ಥಿನಿ ಪೂಜಾ ಕುಂಬಾರ ಭರತ ನಾಟ್ಯ ಪ್ರದರ್ಶಿಸಿದರು. ರಾಜು ಯಲ್ಲಾಯಿಗೋಳ ಸ್ವಾಗತಿಸಿದರು. ಪ್ರಗತಿ ಬನಸೋಡೆ ನಿರೂಪಿಸಿದರು. ಚಂದ್ರಕಾಂತ ಗುರುಪಾದಗೋಳ ವಂದಿಸಿದರು.