ದರ್ಶನ್‌ಗೆ ಫೀಸಿಯೊ ಥೆರಪಿ

Published on

ಬಳ್ಳಾರಿ : ಕೊಲೆ ಆರೋಪಿ ದರ್ಶನ್‌ಗೆ ಬೆನ್ನು ನೋವಿನ ಸಮಸ್ಯೆ ಹಿನ್ನಲೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿಯೇ ಫೀಸಿಯೊ ಥೆರಪಿ ಮಾಡಿಸಲಾಗಿದೆ ಎಂದು ಮೂಲಗಳು ತಿಳಿಸಿದವು.

ಕಳೆದ ಕೆಲ ದಿನಗಳಿಂದ ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಇತ್ತೀಚೆಗೆ ಬಿಮ್ಸ್ ವೈದ್ಯರು ತಪಾಸಣೆ ನಡೆಸಿ ವರದಿ ನೀಡಿದ್ದರು. ಜಿಲ್ಲೆಯ ಬಿಮ್ಸ್‌ಗೆ ತೆರಳಿ ಫೀಸಿಯೊ ಥೆರಪಿ ಮಾಡಲು ದರ್ಶನ್ ನಿರಾಕರಿಸಿದ್ದರಿಂದ ವೈದ್ಯರೇ ಜೈಲಿಗೆ ಭೇಟಿ ನೀಡಿ ಫೀಸಿಯೊ ಥೆರಪಿ ಮಾಡಿಸಿದ್ದಾರೆ. ನಿತ್ಯ ವ್ಯಾಯಾಮ ಮಾಡಿ, ಮಾತ್ರೆ ಬಳಸಿದರೆ ಬೆನ್ನು ನೋವಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ವೈದ್ಯರು ದರ್ಶನ್‌ಗೆ ತಿಳಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ದರ್ಶನ್ ಪರ ವಕೀಲ ಸುನೀಲ್ ಮೆಡಿಕಲ್ ರಿಫೋರ್ಟ ನೀಡುವಂತೆ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ಇದರನ್ವಯ ಶನಿವಾರ ಜೈಲು ಅಧಿಕಾರಿಗಳು ವಕೀಲರಿಗೆ ವರದಿಯನ್ನು ಮೇಲ್ ಮಾಡಲಾಗಿದೆ. ಮೆಡಿಕಲ್ ವರದಿಯನ್ನು ಹೈ ಕೋರ್ಟ್‌ಗೆ ಸಲ್ಲಿಸಿ ಚಿಕಿತ್ಸೆಗಾಗಿ ದರ್ಶನ್‌ನನ್ನು ಬೆಂಗಳೂರಿಗೆ ಸ್ಥಳಾಂತರ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net