ವೈದ್ಯನ ಮೇಲೆ ಹಲ್ಲೆ, ಸಿಪಿಸಿ ವಿರುದ್ಧ ಕ್ರಮ

Police
Published on

ಬೆಳಗಾವಿ: ಕರೊನಾ ವೈರಸ್ ನಿಯಂತ್ರಣ ತುರ್ತು ಸೇವೆಯಲ್ಲಿದ್ದ ಜಿಲ್ಲಾ ಆರೋಗ್ಯ ಮೇಲ್ವಿಚಾರಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿ ವಿರುದ್ಧ ನಗರ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶಕುಮಾರ ಶಿಸ್ತುಕ್ರಮ ಜರುಗಿಸಿದ್ದಾರೆ.

ಘಟನೆಯಲ್ಲಿ ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಬಸವರಾಜ ಎಸ್.ಡೊಳ್ಳಿನ ಎಂಬುವವರು ಗಾಯಗೊಂಡಿದ್ದರು. ಮಾಳಮಾರುತಿ ಠಾಣೆಯ ಸಿಪಿಸಿ ಮಂಜುನಾಥ ಮಲ್ಲಸರ್ಜ ಕರ್ತವ್ಯದಲ್ಲಿದ್ದಾಗ ಅದೇ ದಾರಿಯಲ್ಲಿ ಮಾಸ್ಕ್ ಧರಿಸದೇ ಹೊರಟಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯ ಬಸವರಾಜ ಎಸ್. ಡೊಳ್ಳಿನ ನಡುವೆ ಮಾಸ್ಕ್ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆಯಿತು.

ಈ ವೇಳೆ ಮಂಜುನಾಥ ಬಸವರಾಜ ಮೇಲೆ ಲಾಠಿ ಬೀಸಿದ್ದರು. ಇದರಿಂದ ಬಸವರಾಜ ಗಾಯಗೊಂಡಿದ್ದ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net