ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ

19ATHANIGRAMIN1
Published on

ಅಥಣಿ ಗ್ರಾಮೀಣ: ಮನುಷ್ಯನ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿಯಾಗಿವೆ. ಹೀಗಾಗಿ, ಎಲ್ಲ ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜತೆಗೆ ಕ್ರೀಡೆಗಳಲ್ಲೂ ಪಾಲ್ಗೊಳ್ಳಬೇಕು ಎಂದು ಪಿಎಸ್‌ಐ ಚಂದ್ರಶೇಖರ ಸಾಗನೂರ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಶಾಂತಾಬಾಯಿ ದೇಶಪಾಂಡೆ ಸಿಬಿಎಸ್‌ಸಿ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನಾಯಕತ್ವ ಗುಣ, ಹೊಣೆಗಾರಿಕೆ, ತಾಳ್ಮೆ, ಆತ್ಮವಿಶ್ವಾಸ ಹಾಗೂ ಒಗ್ಗಟ್ಟು ಸೇರಿ ಅಗತ್ಯ ಜೀವನ ಕೌಶಲ ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿನ ವಿಪುಲ ಅವಕಾಶ ಸದುಪಯೋಗ ಪಡಿಸಿಕೊಂಡು ಕ್ರೀಡಾಪಟುಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಅಶೋಕ ತುಪ್ಪದ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ದತ್ತಾತ್ರೇಯ ಭೋಸಲೆ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಸಿಆರ್‌ಪಿ ಮಹಾದೇವ ಜುಲ್ಪಿ, ವರದಿಗಾರ ಮೋಹನ ಪಾಟಣಕರ, ಸಂಜೀವ ಗೌರಗೊಂಡ, ಶಿವಾನಂದ ಹಿರೇಮಠ, ವಿದ್ಯಾಸಾಗರ ಪಾಟೀಲ, ದತ್ತಾತ್ರೇಯ ಜಾಧವ, ಸ್ವಾಗತ ಪಾಟೀಲ, ಮುರಗೇಶ ಹಲ್ಯಾಳ, ಪದ್ಮಾಕರ ಕುಲಕರ್ಣಿ, ನಯನಾ ನಾಯಿಕ, ಶಿವಲೀಲಾ ವಸದ, ಉಜ್ವಲಾ ಜಾಧವ, ಭಾರತಿ ದಿನ್ನಿ ಇತರರಿದ್ದರು. ನಿಖಿತಾ ಹೊಸಟ್ಟಿ ನಿರೂಪಿಸಿದರು. ಸ್ನೇಹಾ ಪೂಜಾರಿ ಸ್ವಾಗತಿಸಿದರು ಹಾಗೂ ಅಕ್ಷಯ ಥೈಕಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net