ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ

25Huk3
Published on

ಹುಕ್ಕೇರಿ: ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ, ಪಠ್ಯೇತರ ಚಟುವಟಿಕೆಗಳಿಗೆ ಮಹತ್ವ ನೀಡಬೇಕು ಎಂದು ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ಕರೀಮ್ ಮಕಾನದಾರ ಹೇಳಿದರು.

ಪಟ್ಟಣದ ಶಾಹಿನ್ ಕಿಡ್ಸ್ ಆಂಗ್ಲ ಮಾಧ್ಯಮ ಶಾಲೆಯ 2ನೇ ವರ್ಷದ ವಾರ್ಷಿಕ ಕ್ರೀಡಾಕೂಟಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಗೆಲುವಿಗಿಂತ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಎಂದರು.

ಸಂಸ್ಥೆಯ ಕಾರ್ಯದರ್ಶಿ ಸಿಕಂದರ್ ಕಳಾವಂತ, ನಿರ್ದೇಶಕರಾದ ಇರ್ಷಾದ್ ಅಹ್ಮದ್ ಮುಲ್ಲಾ, ಪ್ರಾಂಶುಪಾಲೆ ಖಾದಿರಾ ಪಟೇಲ್, ಫಾರುಖ್ ಮುಲ್ಲಾ, ರಫೀಕ್ ಮಕಾನದಾರ, ನಿವೃತ್ತ ಉಪನ್ಯಾಸಕ ಸಲೀಂ ಕಾದ್ರೋಳ್ಳಿ, ಡಿ.ಆರ್.ಖಾಜಿ, ಸಮದ್ ಖಾನಜಾದೆ, ಮುಬಾರಕ ಬೇಪಾರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net