ಪೌರಕಾರ್ಮಿಕರಿಗೂ ದೈಹಿಕ ಆರೋಗ್ಯ ಮುಖ್ಯ

22 09 2025_BGR RURAL_PAGE_02 NEW
ದೇವನಹಳ್ಳಿಯ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ಕ್ರೀಡಾಕೂಟಕ್ಕೆ ಪುರಸಭೆ ಅಧ್ಯಕ್ಷ ಡಿ.ಎಂ.ಮುನಿಕೃಷ್ಣ ಚಾಲನೆ ನೀಡಿದರು. ಉಪಾಧ್ಯಕ್ಷ ಜಿ.ಎ.ರವೀಂದ್ರ, ಸ್ಥಾಯಿ ಸಮಿತಿ ಅಧ್ಯೆ ಕೋಮಲಾ ನಟರಾಜ್​, ಸದಸ್ಯರಾದ ಎನ್​.ರು, ಜಿ.ಸುರೇಶ್​, ಸಮುದಾಯ ಸಂಟನ ಅಧಿಕಾರಿ ಬೈರಪ್ಪ ಇತರರು ಇದ್ದರು.
Published on

ದೇವನಹಳ್ಳಿ : ಪ್ರತಿದಿನ ಕೊಳಕು ತೆಗೆದು ಪಟ್ಟಣ ಸ್ವಚ್ಛವಾಗಿಸುವ ಪೌರಕಾರ್ಮಿಕರಿಗೂ ವಿಶಾಂತಿ, ಆರೋಗ್ಯ ಅವಶ್ಯಕ. ದೈಹಿಕ ಆರೋಗ್ಯದ ಜತೆಗೆ ಅವರಲ್ಲಿರುವ ಕ್ರೀಡಾ ಪ್ರತಿಭೆ ಪ್ರದರ್ಶಿಸಲು ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ ಎಂದು ಪುರಸಭೆ ಅಧ್ಯಕ್ಷ ಡಿ.ಎಂ.ಮುನಿಕೃಷ್ಣ ಹೇಳಿದರು. ಪೌರಕಾರ್ಮಿರ ದಿನಾಚರಣೆ ಪ್ರಯುಕ್ತ ಪಟ್ಟಣದ ಸರ್ಕಾರಿ ಕಿರಿಯ ಕಾಲೇಜಿನ ಆಟದ ಮೈದಾನದಲ್ಲಿ ಆಯೋಜ್ದಿದ ಪೌರಕಾರ್ಮಿಕರ ಕ್ರೀಡಾಕೂಟದಲ್ಲಿ ಮಾತನಾಡಿದ ಅವರು, ಪೌರಕಾರ್ಮಿಕರಿಗೆ ಇದು ಸದಾವಕಾಶ. ಅಥ್ಲೆಟಿಕ್​, ಹಗ್ಗಜಗ್ಗಾಟ, ವೇಗದ ನಡಿಗೆ, ಮ್ಯೂಸಿಕಲ್​ ಚೇರ್​, ವಾಲೀಬಾಲ್​, ಗುಂಡು ಎಸೆತ ಸೇರಿ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. 90 ಕ್ಕೂ ಹೆಚ್ಚು ಕಾರ್ಮಿಕರು ಉತ್ಸಾಹದಿಂದ ಭಾಗವಹಿಸಿದ್ದು, 23ರಂದು ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಗುವುದು ಎಂದರು.

ಪುರಸಭೆ ಮುಖ್ಯಾಧಿಕಾರಿ ಎ.ಶಿವಮೂರ್ತಿ ಮಾತನಾಡಿ, ಕಾರ್ಮಿಕರು ನಿತ್ಯ ಅದೇ ಜಂಜಾಟದಲ್ಲಿ ತೊಡಗಿರುತ್ತಾರೆ. ಅವರ ಮನೋಲ್ಲಾಸಕ್ಕಾಗಿ ಕ್ರೀಡಾಸಕ್ತಿ ಪ್ರದರ್ಶನಕ್ಕಾಗಿ ಇದು ಸುವರ್ಣ ಅವಕಾಶ. ಕ್ರೀಡೆಯಲ್ಲಿ ಸೋಲು ಗೆಲುವು ಮುಖವಲ್ಲ ಭಾಗವಹಿಸುವಿಕೆ ಮುಖ್ಯ ಎಂದು ಹೇಳಿದರು. ಪುರಸಭೆ ಉಪಾಧ್ಯಕ್ಷ ಜಿ.ಎ.ರವೀಂದ್ರ, ಆರೋಗ್ಯ ನಿರೀಕ್ಷಕಿ ಶ್ರೀದೇವಿ, ಮ್ಯಾನೇಜರ್​ ಸರಸ್ವತಿ, ಸಂದ ಅಧ್ಯಕ್ಷ ಮಂಜಪ್ಪ, ಪ್ರಧಾನ ಕಾರ್ಯದರ್ಶಿ ಎ.ಮಂಜುನಾಥ್​, ಎಫ್​.ಎಸ್​.ಟಿ.ಪಿ ಆದರ್ಶ, ತೀರ್ಪುಗಾರ ದೈಹಿಕ ಶಿಕ್ಷಕ ಬಿ.ಪುಟ್ಟಸ್ವಾಮಿ, ವೇಣು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net