ದೈಹಿಕ ಅಂತರ ಕಾಯ್ದುಕೊಂಡು ಜೀವನ ಸಾಗಿಸಿ

19 Raibag 4_Web
ರಾಯಬಾಗ ಪಟ್ಟಣದ ಶಾಖಾ ಮಠದಲ್ಲಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪೂಜಾರಿಗಳು ಹಾಗೂ ಅರ್ಚಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು. ಶಾಸಕ ಡಿ.ಎಂ.ಐಹೊಳೆ, ಅರುಣ ಐಹೊಳೆ, ಎಸ್.ಎಸ್.ಕಾಂಬಳೆ, ಬಿ.ಬಿ.ಪೂಜಾರ, ಎಂ.ಸಿ. ಖಿಚಡೆ ಇತರರು ಉಪಸ್ಥಿತರಿದ್ದರು.
Published on

ರಾಯಬಾಗ: ಲಾಕ್‌ಡೌನ್‌ನಿಂದಾಗಿ ದೇವಸ್ಥಾನಗಳಿಗೆ ಬೀಗ ಹಾಕಲಾಗಿದ್ದು, ದೇವರ ಪೂಜೆ ಮಾಡಿ ಜೀವನ ಸಾಗಿಸುತ್ತಿರುವ ಅರ್ಚಕರು, ಪೂಜಾರಿಗಳು ಸಂಕಷ್ಟ ಎದುರಿಸುವಂತಾಗಿದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಸೋಮವಾರ ಪಟ್ಟಣದ ಹುಕ್ಕೇರಿ ಹಿರೇಮಠದ ಶಾಖಾ ಮಠದಲ್ಲಿ ವಿವಿಧ ಸಮುದಾಯದ ಪುರೋಹಿತರು, ಪೂಜಾರಿಗಳಿಗೆ ತಮ್ಮ ಸ್ವಂತ ಖರ್ಚಿನಿಂದ ಅಕ್ಕಿ, ಬೇಳೆ, ಎಣ್ಣೆ, ಸಕ್ಕರೆ ಸೇರಿ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ಮಾತನಾಡಿದರು.

ಶಾಸಕ ಡಿ.ಎಂ. ಐಹೊಳೆ ಮಾತನಾಡಿ, ದೇವರ ಪೂಜೆ ಮಾಡಿ ಅದರಿಂದ ಬರುವ ಆದಾಯದಲ್ಲಿಯೇ ಜೀವನ ಸಾಗಿಸುತ್ತಿರುವ ಪೂಜಾರಿಗಳಿಗೆ ಸಾಕಷ್ಟು ತೊಂದರೆಯಾಗಿರುವುದರಿಂದ ಅವರಿಗೆ ಸಹಾಯವಾಗಲೆಂದು ಸ್ವಾಮೀಜಿ ಕಿಟ್ ವಿತರಿಸುತ್ತಿದ್ದಾರೆ. ಸಾರ್ವಜನಿಕರು ದೈಹಿಕ ಅಂತರ ಕಾಯ್ದುಕೊಂಡು ನಮ್ಮ ಕೆಲಸ ಕಾರ್ಯಗಳಿಗೆ ತೊಂದರೆಯಾಗದಂತೆ ಕರೊನಾ ಜತೆಗೆ ಹೊಂದಿಕೊಂಡು ಜೀವನ ಸಾಗಿಸಬೇಕಾಗಿರುವುದು ಅನಿವಾರ್ಯವಾಗಿದೆ ಎಂದರು.

ಅರುಣ ಐಹೊಳೆ, ಎಸ್.ಎಸ್. ಕಾಂಬಳೆ, ಬಿ.ಬಿ.ಪೂಜಾರ, ಎಂ.ಸಿ. ಖಿಚಡೆ, ವಾಮನರಾವ ಪತ್ತಾರ, ಮಲ್ಲು ಮೇತ್ರಿ, ಡಿ.ಜಿ.ಕುಂಬಾರ, ಎಸ್.ಜೆ.ಉಪಾಧ್ಯಾಯ ಹಾಗೂ ಎಲ್ಲ ಸಮುದಾಯಗಳ ಅರ್ಚಕರು, ಪೂಜಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net