ಭೌತಿಕ ವಿಷಯಗಳಿಂದ ಸಂಸಾರಿಕ ಬಂಧನ

18MAMADAPUR1
Published on

ಮಮದಾಪುರ: ನಾವೆಲ್ಲರೂ ಭೌತಿಕ ವಿಷಯ ವಸ್ತುಗಳನ್ನು ಪ್ರೀತಿಸುತ್ತಿದ್ದೇವೆ. ಅದು ನಮ್ಮನ್ನು ಸಂಸಾರದ ಬಂಧನಕ್ಕೆ ಸೀಮಿತಗೊಳಿಸುತ್ತದೆ. ಭಗವಂತನ ಸೇವೆಯಲ್ಲಿ ತೊಡಗಿಸಿಕೊಂಡರೆ ಅದು ಸಂಸಾರದಿಂದ ವಿಮೋಚನೆಗೊಳಿಸುತ್ತದೆ ಎಂದು ಸುಕ್ಷೇತ್ರ ಇಂಚಲ ಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.

ಗ್ರಾಮದ ಶಿವಶಕ್ತಿ ನಗರದ (ಪಂಚನಾಯಕನಟ್ಟಿ ಕ್ರಾಸ್) ಸಿದ್ದಾರೂಢರ 14ನೇ ಜಾತ್ರಾ ಮಹೋತ್ಸವದಲ್ಲಿ ಸೋಮವಾರ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.

ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಮಾತನಾಡಿ, ನಮ್ಮ ಪೂರ್ವಿಕರ ಜಾತ್ರೆ, ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಕ್ರಮಗಳು ಬಹಳ ಪ್ರಾಮುಖ್ಯ ಪಡೆದಿವೆ. ಪ್ರವಚನಗಳ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಪಾವನ ಎಂದು ಹೇಳಿದರು.

ಸಿದ್ದಾರೂಢರ ಭಾವಚಿತ್ರ ಮೆರವಣಿಗೆಯು ಸುಮಂಗಲೆಯರ ಕುಂಭಮೇಳ, ಆರತಿ ಸಕಲ ವಾದ್ಯಮೇಳದೊಂದಿಗೆ ಜರುಗಿತು. ಡಾ. ಶಿವಾನಂದ ಭಾರತಿ ಸ್ವಾಮೀಜಿ ತುಲಾಭಾರ ನೆರವೇರಿತು.

ಹರಳಿಕಟ್ಟಿ ನಿಜಗುಣ ಸ್ವಾಮೀಜಿ, ಜಾರಕಿಹೊಳಿ ಕೃಪಾನಂದ ಸ್ವಾಮೀಜಿ, ಪಂಚನಾಯಕನಹಟ್ಟಿ ಕೇಶವಾನಂದ ಸ್ವಾಮೀಜಿ, ಸ್ಥಳೀಯ ಚರಮೂರ್ತೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಸದಸ್ಯರಾದ ಟಿ.ಆರ್. ಕಾಗಲ್, ಮಡ್ಡೆಪ್ಪ ತೋಳಿನವರ, ಸುರೇಶ ಸನದಿ, ಶ್ರೀಶೆಲ ಶೀಗಿಹಳ್ಳಿ, ಕೆಂಪಣ್ಣ ಮೆಲನ್ನವರ, ಸೌಭಾಗ್ಯಲಕ್ಷ್ಮೀ ಶುಗರ್ಸ್ ಮಹೇಶ ಪಾಟೀಲ, ಸುರೇಶ ನಾಗನೂರ, ರುದ್ರಗೌಡ ಪಾಟೀಲ, ಸಿದ್ಧಾರೂಢ ಬೆಣ್ಣಿ, ಪ್ರಭು ಪವಾಡಿ, ಅಪ್ಪಯ್ಯ ಮನ್ನಿಕೇರಿ, ಆನಂದ ಲಂಗೋಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net