ದೈಹಿಕ ಸದೃಡತೆಗೆ ಕ್ರೀಡೆ ಅವಶ್ಯ: ಗ್ರಾಪಂ ಸದಸ್ಯ ವಿರುಪಾಕ್ಷಗೌಡ ಪಾಟೀಲ್ ಅನಿಸಿಕೆ

3
Published on

ಅಳವಂಡಿ: ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಸದೃಡತೆಗೆ ಅವಶ್ಯಕವಾಗಿವೆ ಎಂದು ಗ್ರಾಪಂ ಸದಸ್ಯ ವಿರುಪಾಕ್ಷಗೌಡ ಪಾಟೀಲ್ ಹೇಳಿದರು.


ಸಮೀಪದ ಕಾತರಕಿ-ಗುಡ್ಲಾನೂರ-ಹಾದರಮಗ್ಗಿ ಗ್ರಾಮಗಳ ಹಾಗೂ ಶೈನಿಂಗ್ ಸ್ಟಾರ್ಸ್‌ ಯುವಕರ ಬಳಗದ ಸಹಯೋಗದಲ್ಲಿ ನಾಗರ ಪಂಚಮಿ ಹಬ್ಬದ ನಿಮಿತ್ತ ಆಯೋಜಿಸಿದ್ದ ಖೋಖೋ ಪಂದ್ಯಾವಳಿಗೆ ಚಾಲನೆ ನೀಡಿ ಭಾನುವಾರ ಮಾತನಾಡಿದರು.

ಗೆಲುವು ಜವಾಬ್ದಾರಿ ಹೆಚ್ಚಿಸಿದರೆ ಸೋಲು ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ಯುವಕರು ವಿದ್ಯಾಭ್ಯಾಸದ ಜೊತೆಗೆ ಇತರ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಇದನ್ನೂ ಓದಿ: ಕ್ರೀಡೆಯಲ್ಲಿ ಡಿಟಿಎಂಎನ್ ವಿದ್ಯಾಸಂಸ್ಥೆಯ ಸಾಧನೆ


ಪ್ರಮುಖರಾದ ಶಂಕರಗೌಡ ಹಿರೇಗೌಡ್ರ, ಯಲ್ಲನಗೌಡ ಮಾಲಿಪಾಟೀಲ, ಮುತ್ತಣ್ಣ ಗುದ್ನೆಪ್ಪನವರ, ಬಸವರಾಜ ಉಳ್ಳಾಗಡ್ಡಿ, ಅಂದಪ್ಪ ಬೇವಿನಾಳ, ಮಲ್ಲಪ್ಪ ಮೇಗಳಮನಿ, ಕೊಟ್ರಯ್ಯ ಹಿರೇಮಠ, ಬಸಪ್ಪ ಕಾಳಿ, ರವಿ ಕಾಳಿ, ಗವಿ ಮುಂಡಾಸದ, ಪರಶುರಾಮ ಹೂವಿನಾಳ, ಈಶಪ್ಪ ಭೈರಣ್ಣವರ, ಬಸನಗೌಡ, ರಾಜಾಭಕ್ಷಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net