ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ

1knk3
ಬಾಲಕರ ಖೋಖೋ ಆಟದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾದ ತಾಲೂಕಿನ ಹುಲಸನಹಟ್ಟಿ ಶಾಲಾ ಮಕ್ಕಳೊಂದಿಗೆ ಸಂಪನ್ಮೂಲ ವ್ಯಕ್ತಿಗಳಾದ ಶಿವಪ್ಪ ಹೆಳವರ, ವಿನಾಯಕ ಬಂಡಿ, ದೈಹಿಕ ಶಿಕ್ಷಣ ಶಿಕ್ಷಕ ಶಿವರೆಡ್ಡಿ ಮಣ್ಣೂರು ಇತರರು ಇದ್ದಾರೆ.
Published on

ಕನಕಗಿರಿ: ಕ್ರೀಡೆಗಳು ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಸಹಕಾರಿ ಎಂದು ದೈಹಿಕ ಪರಿವೀಕ್ಷಕಿ ಸರಸ್ವತಿ ಜೂಡಿ ಹೇಳಿದರು.

ಪಟ್ಟಣದ ಎಂ.ಎಚ್.ಪಿ.ಎಸ್ ಶಾಲಾ ಮೈದಾನದಲ್ಲಿ ಕನಕಗಿರಿ ಉತ್ತರ, ದಕ್ಷಿಣ, ನವಲಿ, ಮುಸಲಾಪುರ ಮತ್ತು ಹುಲಿಹೈದರ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳಿಗೆ ಓದಿನ ಜೊತೆಗೆ ದೈಹಿಕ ಸದೃಢತೆಗಾಗಿ ಕ್ರೀಡೆಗಳನ್ನು ನಡೆಸಲಾಗುತ್ತದೆ. ಪ್ರಾಥಮಿಕ ಹಂತದಿಂದಲೇ ಕ್ರೀಡಾಕೂಟಗಳು ನಡೆಯುತ್ತವೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿಯೂ ಮಿಂಚಬೇಕು. ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಶಿವಪ್ಪ ಹೆಳವರ, ವಿನಾಯಕ ಬಂಡಿ, ವಿಜಯಕುಮಾರ ಹೊಸಳ್ಳಿ, ರಾಜಕುಮಾರ, ಮುಖ್ಯ ಶಿಕ್ಷಕರಾದ ಸಂಗಮೇಶ ಹಿರೇಮಠ, ನಾಗಪ್ಪ ಹೊಸ್ಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net