ದೈಹಿಕ ಶಿಕ್ಷಕರಿಂದ ಸಂಘಟಿತ ಹೋರಾಟ ಅಗತ್ಯ

27 Dwd 7
Published on

ಧಾರವಾಡ: ದೈಹಿಕ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಮತ್ತು ಸಮಸ್ಯೆಗಳ ಪರಿಹಾರಕ್ಕೆ ರಾಜ್ಯದ ಎಲ್ಲ ದೈಹಿಕ ಶಿಕ್ಷಕರು ಸಂಘಟಿತ ಹೋರಾಟ ಮಾಡಬೇಕು ಎಂದು ಎಐಪಿಟಿಎ-ï ಕಾಯÁðಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.
ರಾಜ್ಯ ದೈಹಿಕ ಶಿಕ್ಷಕರ ಸಂಘದ ಶಹರ ಘಟಕದಿಂದ ನಗರದ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಶೈಕ್ಷಣಿಕ ಕಾಯÁðಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವೃಂದ ಮತ್ತು ನೇಮಕಾತಿಯಲ್ಲಿ ದೈಹಿಕ ಶಿಕ್ಷಕರ ಪದೋನ್ನತಿಗೆ ತೊಂದರೆ ಉಂಟಾಗುತ್ತಿದೆ. ಹಾಗಾಗಿ ದೈಹಿಕ ಶಿಕ್ಷಕರನ್ನೂ ಶಿಕ್ಷಕರನ್ನಾಗಿ ಪರಿಗಣಿಸಿ ಪದೋನ್ನತಿ ನೀಡಬೇಕು ಎಂಬ ಒತ್ತಾಯ ನಿರಂತರವಾಗಿದೆ. ಈಗಾಗಲೇ ಹಲವು ಬಾರಿ ಸರ್ಕಾರದ ಗಮನ ಸೆಳೆಯಲಾಗಿದ್ದರೂ ಬೇಡಿಕೆ ಈಡೇರಿಲ್ಲ ಎಂದರು.
ಶಾಲೆಗಳಲ್ಲಿ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕಗಳು ನಡೆಯಬೇಕು. ಇದರಿಂದ ಮಕ್ಕಳು ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ದೆÀÊಹಿಕ ಶಿಕ್ಷಕರು ಮಕ್ಕಳಿಗೆ ಲಯಬದ್ಧವಾಗಿ ದೈಹಿಕ ಚಟುವಟಿಕೆಗಳನ್ನು ಕಲಿಸುವ ಜೊತೆಗೆ ಕ್ರೀಡಾ ಉತ್ಸಾಹವನ್ನು ತುಂಬುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡ ಮಾತನಾಡಿ, ದೈಹಿಕ ಶಿಕ್ಷಕರು ಕ್ರಿಯÁಶೀಲವಾಗಿದ್ದರೆ ಶಾಲೆಯ ವಾತಾವರಣ ಉತ್ತಮವಾಗಿರುತ್ತದೆ. ಅದಕ್ಕಾಗಿ ಮುಖ್ಯಾಧ್ಯಾಪಕರು ದೈಹಿಕ ಶಿಕ್ಷಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ, ಉಪ ಸಮನ್ವಯ ಯೋಜನಾಧಿಕಾರಿ ಎಸ್.ಎಂ. ಹುಡೇದಮನಿ ಮÁತನಾಡಿದರು.
ದೈಹಿಕ ಶಿಕ್ಷಣ ಶಿಕ್ಷಕರ ಶಹರ ಘಟಕದ ಅಧ್ಯಕ್ಷ ಬಸವರಾಜ ಪಟ್ಟಣದವರ ಅಧ್ಯಕ್ಷತೆ ವಹಿಸಿದ್ದರು. ಉತ್ತಮ ಮುಖ್ಯಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಸ್.ಬಿ. ಕೇಸರಿ, ಎಂ.ಜಿ. ಬಿರಾದಾರ, ನಿವೃತ್ತ ಶಿಕ್ಷಕ ಅಶೋಕ ಮುತ್ತಗಿ, ಬಿ.ಕೆ. ಗೆದ್ದಿಕೇರಿ ಅವರನ್ನು ಸನ್ಮಾನಿಸಲಾ¬ತು.
ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ ಅಡಿವೇರ, ಪ್ರಮೋದ ರೋಣದ, ಆರ್.ಎಚ್. ನೇಗಲಿ, ಪಿ.ಎಸ್. ಅಂಕಲಿ, ಡಾ. ಆರ್.ಕೆ. ಪಡದಾರೆ, ಹಜರತ್ ಹಣಬರಟ್ಟಿ, ಎಸ್.ಬಿ. ಬಸಾಪೂರ, ಪರಶುರಾಮ ಸಾಳುಂಕೆ, ಬಸವರಾಜ ನವಲಗುಂದ, ಐ.ಟಿ. ಮರ್ಜೆಡೆ, ಪಿ.ಎಲ್. ಮಲ್ಲಿಗವಾಡ, ಪಿ.ಎಸ್. ಸಜ್ಜನರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net