ಕ್ರೀಡೆಯಿಂದ ದೈಹಿಕ, ಮಾನಸಿಕ ಆರೋಗ್ಯ

01 HRR
Published on

ಹರಿಹರ: ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆಯು ಉತ್ತಮ ಸಾಧನವಾಗಿದೆ ಎಂದು ದೈಹಿಕ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎ. ಪರಶುರಾಮಪ್ಪ ಹೇಳಿದರು.

ತಾಲೂಕಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಂಕೆಇಟಿ ಶಿಕ್ಷಣ ಸಂಸ್ಥೆಗಳ ಕ್ರೀಡಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಬೇಕೆಂಬ ಧಾವಂತದಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಿರ್ಲಕ್ಷಿಸಬಾರದು. ಶಾಲಾ ಶಿಕ್ಷಕರು ಹಾಗೂ ಪಾಲಕರು ಅವರನ್ನು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಲು ಪೋ›ತ್ಸಾಹಿಸಬೇಕು ಎಂದರು.

ಶಾಲೆಯ ಆಡಳಿತಾಧಿಕಾರಿ ಡಾ.ಬಿ.ಟಿ. ಅಚ್ಯುತ್ ಮಾತನಾಡಿ, ದೊಡ್ಡ ಕ್ರೀಡಾಂಗಣ ಹೊಂದಿರುವ ಕೀರ್ತಿ ನಮ್ಮ ಶಾಲೆಗಿದೆ, ಶೀಘ್ರವೇ ಒಳಾಂಗಣ ಕ್ರೀಡೆಗಳಿಗೆ ಅಗತ್ಯ ಕಟ್ಟಡಗಳನ್ನು ನಿರ್ವಿುಸಲು ನಿರ್ಧರಿಸಲಾಗಿದೆ ಎಂದರು.

ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಎಂಕೆಇಟಿ ಶಿಕ್ಷಣ ಸಂಸ್ಥೆ ವಿವಿಧ ವಿಭಾಗಗಳ ಪ್ರಾಂಶುಪಾಲರಾದ ಮಂಜುನಾಥ ಕುಲಕರ್ಣಿ, ಡಿ.ಟಿ. ತಿಪ್ಪಣ್ಣರಾಜು, ಕೆ.ಎನ್. ಸುಜಾತಾ, ಅರ್ಚನಾ ಮುಳುಗುಂದ್ ಮಾತನಾಡಿದರು.

ಸಹ ಶಿಕ್ಷಕ ಭೀಮೇಶ್ ಸ್ವಾಗತಿಸಿದರು. ಸ್ನೇಹಾ ಶೆಟ್ಟಿ ನಿರೂಪಿಸಿದರು. ರಮೇಶ್ ಮತ್ತು ಭಾಗ್ಯಾ ಪ್ರಶಸ್ತಿ ವಿಜೇತರ ಪಟ್ಟಿ ವಾಚಿಸಿದರು. ದೈಹಿಕ ಶಿಕ್ಷಕರಾದ ಜಿ.ಟಿ. ರಮೇಶ್, ಕೆ.ಬಿ. ಚಂದ್ರಶೇಖರ್, ಎ.ವಿ. ರಮೇಶ್ ಕ್ರೀಡಾ ವರದಿ ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net