ಕ್ರೀಡೆಗಳಿಂದ ದೈಹಿಕ, ಮಾನಸಿಕ ವೃದ್ಧಿ

Physical and mental growth through sports
ಬೀಳಗಿ ಹೋಲಿಸೆಂಟ್ ಪಪೂ ಕಾಲೇಜಿನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ವಿ.ಪ. ಸದಸ್ಯ ಎಚ್.ಆರ್. ನಿರಾಣಿ ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ ಎ.ಎಂ. ಸೋಲಾಪುರ, ಶಿವಾನಂದ ಯಾಳವಾರಮಠ ಇದ್ದರು.
Published on

ಬೀಳಗಿ: ವಿದ್ಯಾರ್ಥಿಗಳು ಶಿಕ್ಷಣ ಜತೆಗೆ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ವೃದ್ಧಿ ಮತ್ತು ದೇಹದಲ್ಲಿ ಆರೋಗ್ಯಕರ ಚೈತನ್ಯ ಬರಲಿದೆ ಎಂದು ವಿಧಾನ ಪರಿಷತ್ ಶಾಸಕ ಹಣಮಂತ ನಿರಾಣಿ ಹೇಳಿದರು.

ಸ್ಥಳೀಯ ಹೋಲಿಸೆಂಟ್ ಪ.ಪೂ.ಕಾಲೇಜಿನಲ್ಲಿ ಗುರುವಾರ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕುಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಗೆಲ್ಲಲೇಬೇಕು ಎನ್ನುವ ಛಲದಿಂದ ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸುತ್ತಾರೆ. ಕ್ರೀಡೆಯಲ್ಲಿ ಗೆಲುವು ಮುಖ್ಯವಲ್ಲ. ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಪ್ರತಿಭೆ ಪ್ರದರ್ಶನ ಮಾಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ವಿಶ್ರಾಂತ ದೈಹಿಕ ಶಿಕ್ಷಕ ಶಿವಾನಂದ ಎಚ್. ಯಾಳವಾರಮಠ ಮಾತನಾಡಿ, ನಮ್ಮ ದೇಶದಲ್ಲಿ ಅನೇಕ ಕ್ರೀಡಾಭಿಮಾನಿಗಳು ಇದ್ದಾರೆ. ಹಲವು ಕ್ರೀಡೆಯಲ್ಲಿ ತಮ್ಮ ಪ್ರತಿಭೆ ಸಾಧಿಸಿ ತೋರಿಸಿದ್ದಾರೆ. ಅಂತಹವರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕಾಗಿದೆ. ಮಕ್ಕಳಲ್ಲಿರುವ ನೈಜ ಪ್ರತಿಭೆ ಗುರುತಿಸುವ ಕೆಲಸವನ್ನು ಶಾಲಾ ಮಟ್ಟದಲ್ಲಿ ಗುರುತಿಸಿದರೆ ಅವರಿಗೆ ಮುಂದೆ ಜಿಲ್ಲಾ, ರಾಜ್ಯ, ಅಂತಾರಾಜ್ಯ, ದೇಶ ವಿದೇಶದಲ್ಲಿ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶ ದೊರೆಯಲಿದೆ ಎಂದು ತಿಳಿಸಿದರು.

ಹೋಲಿಸೆಂಟ್ ಕಾಲೇಜಿನ ಅಧ್ಯಕ್ಷ ಎ.ಎಂ. ಸೋಲಾಪೂರ, ಪಪಂ ಸದಸ್ಯರಾದ ಅಜ್ಜುಬಾಯಿ ಸರ್ಕಾರ, ವಿಶ್ರಾಂತ ದೈಹಿಕ ಶಿಕ್ಷಕ ಶಿವಾನಂದ ಯಾಳವಾಮಠ, ಸಂಗಪ್ಪ ಎತ್ತಿಮನಿ, ಕಾನಿಪ ಸಂಘದ ತಾಲೂಕು ಅಧ್ಯಕ್ಷ ಸುಭಾಸ ರಾಠೋಡ, ತಾಲೂಕು ಕ್ರೀಡಾ ಸಂಯೋಜಕ ಶಿಖಂದರ ಹವಾಲ್ದಾರ್, ಸಂಸ್ಥೆ ಕಾರ್ಯದರ್ಶಿ ಎ.ಎ. ಸೋಲಾಪುರ, ನೂರಲಿ ತಹಸೀಲ್ದಾರ್, ಪ್ರಾಂಶುಪಾಲ ಬಿ.ಎ. ಬಿಕ್ಷಾವತಿ, ನಿರಾಣಿ ಕಾಲೇಜು ಪ್ರಾಂಶುಪಾಲ ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net