ಮೌಢ್ಯಗಳ ವಿರುದ್ಧ ಹೋರಾಡಿದವರು ಫುಲೆ

ಪಿರಿಯಾಪಟ್ಟಣದ ಡಿ.ದೇವರಾಜ ಅರಸು ಕಲಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಶಿಕ್ಷಕಿಯರನ್ನು ಸನ್ಮಾನಿಸಲಾಯಿತು. ನಿತಿನ್ ವೆಂಕಟೇಶ್, ಸಿ.ಕೆ.ಸರಸ್ವತಿ, ಡಾ.ಶಿವಕುಮಾರ್, ಡಿ.ಎನ್.ರವಿ ಪ್ರಸನ್ನ, ಶಿವರಾಜು, ಎಂ.ಸಿ.ಪ್ರಶಾಂತ್, ಲಿಲ್ಲಿ ಮೇರಿ, ಎಚ್.ಎಂ.ಜ್ಯೋತಿ, ರುಕ್ಮಿಣಿ, ರಫಿಯಾ ಬಾನು, ಪಿ.ಕೆ.ಜಯಂತಿ, ಸಿ.ವಿಜಯಾ, ಶೈಲಜ, ಶಕುಂತಲಾ ಇದ್ದರು.
ಪಿರಿಯಾಪಟ್ಟಣದ ಡಿ.ದೇವರಾಜ ಅರಸು ಕಲಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು. ನಿತಿನ್ ವೆಂಕಟೇಶ್, ಸಿ.ಕೆ.ಸರಸ್ವತಿ, ಡಾ.ಶಿವಕುಮಾರ್, ಡಿ.ಎನ್.ರವಿ ಪ್ರಸನ್ನ, ಶಿವರಾಜು, ಎಂ.ಸಿ.ಪ್ರಶಾಂತ್, ಲಿಲ್ಲಿ ಮೇರಿ, ಎಚ್.ಎಂ.ಜ್ಯೋತಿ, ರುಕ್ಮಿಣಿ, ರಫಿಯಾ ಬಾನು, ಪಿ.ಕೆ.ಜಯಂತಿ, ಸಿ.ವಿಜಯಾ, ಶೈಲಜ, ಶಕುಂತಲಾ ಇದ್ದರು.
Published on

ಪಿರಿಯಾಪಟ್ಟಣ: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವುದರ ಜತೆಗೆ ಸಾಮಾಜಿಕ ಮೌಢ್ಯಗಳ ವಿರುದ್ಧ ಹೋರಾಡಿದ ಪ್ರಥಮ ಶಿಕ್ಷಕಿ ಸಾವಿತ್ರಿ ಬಾಯಿಫುಲೆ ಅವರ ಆದರ್ಶಗಳನ್ನು ಪ್ರತಿ ಹೆಣ್ಣು ಮೈಗೂಡಿಸಿಕೊಳ್ಳಬೇಕೆಂದು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಸಲಹೆ ನೀಡಿದರು.

ಪಟ್ಟಣದ ಡಿ.ದೇವರಾಜ ಅರಸು ಕಲಾಭವನದಲ್ಲಿ ಶನಿವಾರ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಹಾಗೂ ಅಕ್ಷರದವ್ವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರೃ ಪೂರ್ವದಲ್ಲಿ ಮೌಢ್ಯದ ವಿರುದ್ಧ ಸಿಡಿದೆದ್ದು ಮೊದಲ ಬಾರಿಗೆ ಶಿಕ್ಷಣ ಕಲಿಯುವ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನಾಂದಿಹಾಡಿದ್ದರು ಎಂದರು.

ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಮೈಸೂರು ಜಿಲ್ಲಾಧ್ಯಕ್ಷೆ ಸಿ.ಕೆ.ಸರಸ್ವತಿ ಮಾತನಾಡಿ, ಮಹಿಳೆಯನ್ನು ಏಕವಚನದಲ್ಲಿ ಮಾತನಾಡಿಬಾರದು. ಜತೆಗೆ ಸ್ತ್ರೀಯರಿಗೆ ಎಲ್ಲ ಕ್ಷೇತ್ರದಲ್ಲಿಯೂ ಮಾನ್ಯತೆ ನೀಡಬೇಕೆಂಬುದು ಅವರ ಆಶಯವಾಗಿತ್ತು ಎಂದರು.

ಬೆಂಗಳೂರಿನ ಅಕ್ಕ ಐಎಎಸ್ ಅಕಾಡೆಮಿಯ ಡಾ.ಶಿವಕುಮಾರ್ ಮಾತನಾಡಿ, ಹೆಣ್ಣು ಮಕ್ಕಳಿಗೆ ಶಿಕ್ಷಣದೊರಕಿಸಿ ಕೊಡುವ ನಿಟ್ಟಿನಲ್ಲಿ ಬಾಫುಲೆ ಅವರು ಹೋರಾಡಿದ್ದನ್ನು ಯಾರೂ ಮರೆಯಬಾರದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಕ್ಲಸ್ಟರ್‌ಗಳಿಂದ ಆಯ್ದ 33 ಶಿಕ್ಷಕಿಯರಿಗೆ ಅಕ್ಷರದವ್ವ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಯಿತು. ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪಡೆದ ಎಚ್.ಎನ್.ಗಿರೀಶ್, ಈ.ರಾಜು ಅವರನ್ನು ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎನ್.ರವಿ ಪ್ರಸನ್ನ, ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಸಿ.ಪ್ರಶಾಂತ್, ತಾಪಂ ಮಾಜಿ ಅಧ್ಯಕ್ಷೆ ಕೆ.ಆರ್.ನಿರೂಪ, ತಾಲೂಕು ಸಾವಿತ್ರಿ ಬಾಯಿಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಗಾಯತ್ರಿ, ಕಾರ್ಯದರ್ಶಿ ಜಿ.ಎಸ್.ಮಂಜುಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net