ಮಹಿಳೆಯರ ಶಿಕ್ಷಣ ಹಕ್ಕಿಗೆ ಹೋರಾಡಿದ ಫುಲೆ

05-kkr,2(1-25
ಕಿಕ್ಕೇರಿಯಲ್ಲಿ ಸ್ಪಂದನಾ ಫೌಂಡೇಷನ್ ವತಿಯಿಂದ ಈಚೆಗೆ ಸಾವಿತ್ರಿಬಾಯಿ ಪುಲೆ ಅವರ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕವಿತಾ, ಸತೀಶ್ ಮುಂತಾದವರು ಇದ್ದರು.
Published on

ಕಿಕ್ಕೇರಿ : ಮಹಿಳೆಯರಿಗೆ ಸಮಾನತೆ, ಸಮಬಾಳು ಸಿಗಲು ಶಿಕ್ಷಣದ ಹಕ್ಕು ಮಹಿಳೆಯರಿಗೆ ಮೊದಲು ಸಿಗಬೇಕು ಎಂದು ಶಿಕ್ಷಣ ಒದಗಿಸಲು ಬಲು ದೊಡ್ಡ ಹೋರಾಟ ಮಾಡಿದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಎಂದು ಸ್ಪಂದನಾ ಫೌಂಡೇಷನ್ ಟ್ರಸ್ಟಿ ತ್ರಿವೇಣಿ ತಿಳಿಸಿದರು.

ಇಲ್ಲಿನ ಸ್ಪಂದನಾ ಫೌಂಡೇಷನ್ ಈಚೆಗೆ ಆಯೋಜಿಸಿದ್ದ ಸಾವಿತ್ರಿ ಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರಿಗಾಗಿ, ಬಡವಿದ್ಯಾರ್ಥಿಗಳಿಗೆ ಮಹಿಳಾ ಶಿಕ್ಷಣ ಶಾಲೆ, ವಸತಿ ಶಾಲೆ, ಬಡವರಿಗಾಗಿ ಆಶ್ರಮ ತೆರೆದ ಮಹಾನ್ ಸಾಧಕಿ ಸಾವಿತ್ರಿ ಬಾಯಿ ಫುಲೆ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸಿದ ಅವ್ವ. ಜಾತಿ, ವರ್ಗ, ಶ್ರೇಣಿ ಎಲ್ಲವನ್ನು ವಿರೋಧಿಸಿ ಸತ್ಯಶೋಧಕ ಸಂಸ್ಥೆ ತೆರೆದರು. ಪುರೋಹಿತರಿಲ್ಲದ ಸರಳ ವಿವಾಹ, ಕುಡಿಯುವ ನೀರಿನ ಸೌಲಭ್ಯ, ಬಾಲ್ಯವಿವಾಹ, ಮಹಿಳಾ ವಿಧವಾ ವಿವಾಹ, ವರದಕ್ಷಿಣೆ ವಿರೋಧಿ ಜಾಗೃತಿ, ಸತಿಪದ್ಧತಿ ವಿರೋಧಕ್ಕೆ ಅರ್ಹನಿಶೆ ದುಡಿದ ಮಹಾನ್ ಸಮಾಜ ಸಾಧಕ ಪರಿವರ್ತಕಿ ಎಂದರು.

ವರ್ಣಾಶ್ರಮ ಪದ್ಧತಿ 19ನೇ ಶತಮಾನದ ಮಧ್ಯಭಾಗದಲ್ಲಿ ದೇಶದಲ್ಲಿ ಮನೆ ಮಾಡಿತ್ತು. ಮಹಿಳೆಯರು ಮನೆಯಿಂದ ಹೊರಬಾರದ ಕಟ್ಟುಪಾಡಿತ್ತು. ಚಿಕ್ಕವಯಸ್ಸಿನಲ್ಲಿಯೇ ಜ್ಯೋತಿ ಬಾಯಿ ಫುಲೆ ಅವರನ್ನು ವಿವಾಹವಾಗಿ ನಂತರ ಮನೆಯವರ ವಿರೋಧದ ನಡುವೆ ಶಿಕ್ಷಣ ಪಡೆದು ಶಿಕ್ಷಣತಜ್ಞೆಯಾದರು. ಹೆಣ್ಣುಮಕ್ಕಳಿಗಾಗಿ ಮಹಾರಾಷ್ಟ್ರದ ವಿವಿಧೆಡೆ ಶಾಲೆ ತೆರೆದು ಶಿಕ್ಷಕರಿಲ್ಲದಾಗ ತಾವೇ ಶಿಕ್ಷಕಿಯಾದರು. ಶಾಲೆಗೆ ತೆರಳುವಾಗ ಹಲವರು ಇವರ ಮೇಲೆ, ಸಗಣಿ, ಮೊಟ್ಟೆಯಂತಹ ವಸ್ತು ಎಸೆದು ಹಿಂಸಿಸಿ ಮೂಲ ಉದ್ದೇಶಕ್ಕೆ ಧಕ್ಕೆ ತಂದರು. ಎಲ್ಲವನ್ನು ಸಹಿಸಿಕೊಂಡು ಸಂಕಷ್ಟಗಳನ್ನು ಲೆಕ್ಕಿಸದೆ ಮಹಿಳೆಯರ ಶಿಕ್ಷಣ, ಸಮಾನತೆಗಾಗಿ ಹೋರಾಡಿ ಅಕ್ಷರದವ್ವರಾದರು ಎಂದು ನುಡಿದರು.

ಮಕ್ಕಳು ಬಾಫುಲೆ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಸ್ಮರಿಸಿದರು. ಕವಿತಾ, ಸತೀಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net