ಹಳೇ ನೆನಪು ಕದಡುವ ಫೋಟೋಗಳು

ಸಂಡೂರು ತಾಲೂಕು ಫೋಟೋಗ್ರಾಫರ್ಸ್‌ ಮತ್ತು ವಿಡಿಯೋ ಗ್ರಾಫರ್ಸ್‌ ಸಂಘದಿಂದ ಹಮ್ಮಿಕೊಂಡಿದ್ದ 186ನೇ ವಿಶ್ವ ಛಾಯಾಗ್ರಹಣ ದಿನ ಕಾರ್ಯಕ್ರಮವನ್ನು ಶಾಸಕಿ ಅನ್ನಪೂರ್ಣ ತುಕಾರಾಮ್ ಉದ್ಘಾಟಿಸಿದರು. ಪ್ರಭುಸ್ವಾಮೀಜಿ, ಎಸ್ಪಿ ಡಾ.ವಿ.ಜೆ.ಶೋಭಾರಾಣಿ, ಸಂಘದ ತಾಲೂಕು ಅಧ್ಯಕ್ಷ ಎಸ್.ಎಂ.ವಿನಯಕುಮಾರ್ ಇತರರಿದ್ದರು.

Published on

ಸಂಡೂರು: ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತೆ ಸಾಹಿತಿ ಭಾನು ಮುಸ್ತಾಕ್ ಆಯ್ಕೆ ಸೂಕ್ತವಾಗಿದೆ ಎಂದು ಪ್ರಭುಸ್ವಾಮೀಜಿ ಹೇಳಿದರು.

ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಂಡೂರು ಫೋಟೋಗ್ರಾಫರ್ಸ್‌ ಮತ್ತು ವಿಡಿಯೋಗ್ರಾಫರ್ಸ್‌ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ 186ನೇ ವಿಶ್ವ ಛಾಯಾಗ್ರಹಣ ದಿನ ಹಾಗೂ ಶಾಲಾ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಮಾತನಾಡಿದರು. ಫೋಟೋಗ್ರಫಿ ಹಳೇ ನೆನಪುಗಳನ್ನು ಕದಡುವ ಹಾಗೂ ನೆನಪಿಸುವ ಕೆಲಸ ಮಾಡುತ್ತದೆ ಎಂದರು.

ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಮಾತನಾಡಿ, ಛಾಯಾಚಿತ್ರಗ್ರಾಹಕರಂತೆ ಫೋಟೊ ತೆಗೆಯಲು ಬಾರದಿರಬಹುದು. ಆದರೆ, ಮೊಬೈಲ್ ಇರುವವರೆಲ್ಲಾ ಫೋಟೋಗ್ರಾಫರ್ಸ್‌. ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.

ಶಾಸಕಿ ಅನ್ನಪೂರ್ಣಾ ತುಕಾರಾಮ್ ಮಾತನಾಡಿದರು. ಅಂತರಾಷ್ಟ್ರೀಯ ಶಿಕ್ಷಣತಜ್ಞ ಎ.ಎಚ್.ಸಾಗರ್, ಫೋಟೋಗ್ರಾಫರ್ಸ್‌ ಸಂಘದ ತಾಲೂಕು ಅಧ್ಯಕ್ಷ ಎಸ್.ಎಂ.ವಿನಯಕುಮಾರ್, ಜಿಲ್ಲಾಧ್ಯಕ್ಷ ನಾಡಗೌಡ ಚಂದ್ರಮೋಹನ್, ಗೌರವಾಧ್ಯಕ್ಷ ಟಿ.ಜಿಲಾನ್, ಪ್ರಮುಖರಾದ ಕೆ.ಎಂ.ವೀರೇಶ ಕೂಡ್ಲಿಗಿ, ಎಸ್.ಎಂ.ಸರಸ್ವತಿ ಗಿರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net