ಸ್ವಾವಲಂಬಿ ಬದುಕಿಗೆ ತರಬೇತಿ ಸಹಕಾರಿ: ಸಂಪನ್ಮೂಲ ವ್ಯಕ್ತಿ ಸೂರ್ಯಪ್ರಕಾಶ್ ಅಭಿಮತ

1 (9)
Published on

ಮಂಡ್ಯ: ಸ್ವತಂತ್ರವಾಗಿ ಉದ್ಯೋಗ ಮಾಡಿ ಸ್ವಾವಲಂಬಿಯಾಗಿ ಬದುಕುವಂತಹ ವಾತಾವರಣ ಕಲ್ಪಿಸಲು ತರಬೇತಿ ಎಂಬುದು ಬಹುಮುಖ್ಯವಾಗಿರುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಸೂರ್ಯಪ್ರಕಾಶ್ ತಿಳಿಸಿದರು.

ನಗರದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿರುವ ಆರ್‌ಸೆಟಿ ಸಭಾಂಗಣದಲ್ಲಿ ಬ್ಯಾಂಕ್ ಆಫ್ ಬರೋಡಾ ಹಾಗೂ ಆರ್‌ಸೆಟಿ ವತಿಯಿಂದ ಛಾಯಾಗ್ರಾಹಕರಿಗೆ ಆಯೋಜಿಸಿದ್ದ ಉಚಿತ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಒಂದು ತಿಂಗಳ ತರಬೇತಿ ಮುಗಿಸಿಕೊಂಡು ಹೊರಗೆ ಹೋದ ನಂತರ ಆತ ಸ್ವತಂತ್ರವಾಗಿ ಉದ್ಯೋಗ ಮಾಡಬಹುದಾಗಿದೆ. ಸ್ವಾವಲಂಬಿಯಾಗಿ ಉಳಿಯಬೇಕು. ಬದುಕಬೇಕು ಎಂಬ ಆತ್ಮಸ್ಥೈರ್ಯ ಹೊರಹೊಮ್ಮುತ್ತದೆ ಎಂದು ಹೇಳಿದರು.

ಇಂತಹ ತರಬೇತಿಗಳಿಂದಾಗಿ ಹಲವಾರು ಜನರು ಸ್ವಉದ್ಯೋಗ ಕೈಗೊಂಡು ಉದ್ಯಮಶೀಲರಾಗಿದ್ದಾರೆ. ಇಂತಹ ಕಾರ್ಯವನ್ನು ನಡೆಸುತ್ತಿರುವ ಸಂಸ್ಥೆಯ ಸೇವೆ ನಿರಂತರವಾಗಿರಲಿ. ಎಲ್ಲ ಉದ್ಯೋಗಗಳೂ ಸಹ ತರಬೇತಿ ಪಡೆದೇ ಮಾಡುವುದರಿಂದ ತಾಂತ್ರಿಕತೆ, ಕೌಶಲ ಜ್ಞಾನವನ್ನು ವೃದ್ಧಿಸಿಕೊಂಡು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದೇ ಆದಲ್ಲಿ ಅಂತಹವರು ಯಶಸ್ವಿ ಉದ್ಯಮಶೀಲರಾಗಿ ಹೊರಹೊಮ್ಮಲು ಸಾಧ್ಯ. ಈ ಹಿನ್ನೆಲೆಯಲ್ಲಿ ವಿಶ್ವದ ಎಲ್ಲ ಕಡೆ ತರಬೇತಿ ನೀಡಲಾಗುತ್ತದೆ ಎಂದರು. ತರಬೇತಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಯುವಜನರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net