ವಿಟ್ಠಲ ಪ್ರೌಢ ಶಾಲೆಯಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ

PTR_19 AUG_2
Published on

ವಿಟ್ಲ: ವಿಟ್ಠಲ ಪ್ರೌಢ ಶಾಲೆಯ ಚಿತ್ರಕಲಾ ಸಂಘ ಹಾಗೂ ವಿಟ್ಲ ರೋಟರಿ ಕ್ಲಬ್ ವತಿಯಿಂದ ವಿಟ್ಠಲ ಪ್ರೌಢ ಶಾಲೆಯ ಸಭಾ ಭವನದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮವನ್ನು ವಿಟ್ಠಲ ಎಜುಕೇಶನ್ ಸೊಸೈಟಿ ಕೋಶಾಧಿಕಾರಿ ಬಾಬು ಕೊಪ್ಪಳ ಉದ್ಘಾಟಿಸಿದರು. ಹಳೆಯ ಕ್ಯಾಮರಾಗಳು, ಫೋಟೋ ಪ್ರಿಂಟಿಂಗ್ ಸಲಕರಣೆಗಳು ಮತ್ತು ಛಾಯಾಚಿತ್ರಗಳ ಪ್ರರ್ಶನ ನಡೆಸಲಾಯಿತು. ವಿಟ್ಲದ ಹಿರಿಯ ಫೋಟೋಗ್ರಾಫರ್‌ಗಳಾದ ಕೃಷ್ಣ ಭಟ್ ಮತ್ತು ಗೋಪಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ಶಾಲಾ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್ ಅಧ್ಯಕ್ಷತೆ ವಹಿಸಿದ್ದರು.

ವಿಟ್ಲದ ಫೋಟೋಗ್ರಾಫರ್‌ಗಳಾದ ಪ್ರವೀಣ್ ವಿಟ್ಲ, ಸದಾಶಿವ ಬನ, ಕೇಶವ, ಪ್ರವೀಣ್ ಸಾಲಿಯಾನ್, ವಿನೋದ್ ವಿಟ್ಲ ಮತ್ತು ಮೋಹನ್ ಇವರನ್ನು ಗೌರವಿಸಲಾಯಿತು. ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಚಿತ್ರಕಲಾ ಶಿಕ್ಷಕ ಉದಯ್ ವಿಟ್ಲ, ಶಿಕ್ಷಕ ರಮೇಶ್ ಬಿ ಕೆ, ರೋಟರಿ ಸದಸ್ಯರುಗಳಾದ ಭಾಸ್ಕರ ಶೆಟ್ಟಿ, ಅಣ್ಣಪ್ಪ ಸಾಸ್ತಾನ, ಮೋಹನ್ ಮೈರ ಮತ್ತು ವಸಂತ ಶೆಟ್ಟಿ, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net