ಫೋಟೋಗ್ರಾಫರ್‌ಗಳ ಹಿತ ಕಾಪಾಡಿ

Untitled design (8)
ದೇವದುರ್ಗದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಛಾಯಗ್ರಾಹಕರ ದಿನಾಚರಣೆ ಅಂಗವಾಗಿ ರೋಗಿಗಳಿಗೆ ಹಣ್ಣು ವಿತರಣೆ ಮಾಡಲಾಯಿತು. ವೈದ್ಯಾಧಿಕಾರಿ ಗಂಗಾಧರ, ಡಾ.ಶಿವಕುಮಾರ, ಹಿರಿಯ ಛಾಯಗ್ರಾಹಕ ಬೂದೆಪ್ಪ ಬಳೆ, ಸಂಘದ ಅಧ್ಯಕ್ಷ ಸಂಗಮೇಶ ಹರವಿ, ವಿಜಯಕುಮಾರ ಕುಂಬಾರ, ಖಜಾಂಚಿ ವೀರೇಶ ಮಸ್ಕಿ, ಕಾರ್ಯದರ್ಶಿ, ಗುರು ಇದ್ದರು.
Published on

ದೇವದುರ್ಗ: ಫೋಟೋಗಳಿಗೆ ಕಥೆ ಹೇಳುವ ಶಕ್ತಿಯಿದೆ. ಮೊಬೈಲ್ ಯುಗದಿಂದ ಫೋಟೋ ಗ್ರಾಫರ್ ಜೀವನ ಕಷ್ಟವಾಗಿದೆ. ಅವರ ಹಿತಕಾಯುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ವೈದ್ಯಾಧಿಕಾರಿ ಗಂಗಾಧರ ಹೇಳಿದರು.

ಫೋಟೋಗಳಿಂದ ಹಳೆಯ ನೆನಪುಗಳು ಮೆಲಕು

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದಿಂದ ಆಯೋಜಿಸಿದ್ದ ವಿಶ್ವ ಛಾಯಗ್ರಾಹಕರ ದಿನದ ಅಂಗವಾಗಿ ರೋಗಿಗಳಿಗೆ ಹಾಲು, ಹಣ್ಣು ವಿತರಣಾ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ಈ ಹಿಂದೆ ಫೋಟೋಗಳ ಮೇಲೆ ಹಳೆಯ ನೆನಪುಗಳು ಮೆಲಕು ಹಾಕುತ್ತಿದ್ದವು. ಮೊಬೈಲ್ ಬಂದರೂ, ತಂತ್ರಜ್ಞಾನ ಬೆಳೆದರೂ ಫೋಟೋಗ್ರಾಫರ್‌ಗಳ ಮೌಲ್ಯ ಕಡಿಮೆಯಾಗಿಲ್ಲ. ಶ್ರೇಷ್ಠ ಫೋಟೋಗ್ರಾಫಿ ಹಲವು ಕಥೆಗಳನ್ನು ಹೇಳುವ ಜತೆಗೆ ಸಮಾಜಕ್ಕೆ ಸಂದೇಶ ನೀಡಿವೆ ಎಂದರು.
ವೈದ್ಯಾಧಿಕಾರಿ ಶಿವಕುಮಾರ, ಹಿರಿಯ ಛಾಯಾಗ್ರಾಹಕ ಬೂದೆಪ್ಪ ಬಳೆ, ಸಂಘದ ಅಧ್ಯಕ್ಷ ಸಂಗಮೇಶ ಹರವಿ, ವಿಜಯಕುಮಾರ ಕುಂಬಾರ, ಖಜಾಂಚಿ ವೀರೇಶ ಮಸ್ಕಿ, ಕಾರ್ಯದರ್ಶಿ ಗುರು ಉಭಾಳೆ, ಪ್ರಮುಖರಾದ ಬಸವರಾಜ್ ಕುಂಬಾರ, ಚನ್ನಯ್ಯ ಸ್ವಾಮಿ ಗೋಸಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net