ಫೋಟೋಗ್ರಾಫರ್ ಸರ್ಕಾರದ ನೆರವಿನ ಅಗತ್ಯ

30-AUG-GPT-2
ಗುಂಡ್ಲುಪೇಟೆ ಪಟ್ಟಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಶ್ವಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮವನ್ನು ಗಣೇಶ್ ಪ್ರಸಾದ್ ಉದ್ಘಾಟಿಸಿದರು. ಜಿ.ಎಸ್.ಮಧುಸೂಧನ್, ಅಣ್ಣಯ್ಯಸ್ವಾಮಿ, ಜಯಕುಮಾರ್, ಮಂಜೇಶ್, ಗಣೇಶ್ ದೀಕ್ಷಿತ್, ಟಿ.ಸಿ.ನಾಗೇಂದ್ರ, ಎಂ.ಎಸ್.ರಾಜೇಂದ್ರಕುಮಾರ್, ಗಿರಿಮಂಜು ಇದ್ದರು.
Published on

ಗುಂಡ್ಲುಪೇಟೆ: ಫೋಟೋಗ್ರಫಿ ಕ್ಷೇತ್ರ ತುಂಬಾ ಬದಲಾವಣೆಯಾಗಿದ್ದರಿಂದ ಫೋಟೋಗ್ರಾಫರ್‌ಗಳು ದುಬಾರಿ ಬಂಡವಾಳ ಹೂಡುವಂತಾಗಿದ್ದು, ಸರ್ಕಾರದ ನೆರವಿನ ಅಗತ್ಯ ಇದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.

ಗುಂಡ್ಲುಪೇಟೆ ಫೋಟೋ ಮತ್ತು ವಿಡಿಯೋಗ್ರಾಫರ್ ಅಸೋಷಿಯೇಷನ್ ವತಿಯಿಂದ ಪಟ್ಟಣದ ಬಸವೇಶ್ವರ ಕಮ್ಯೂನಿಟಿ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ 186ನೇ ಜಿಲ್ಲಾ ಮಟ್ಟದ ವಿಶ್ವಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಫೋಟೋಗ್ರಫಿ ಹವ್ಯಾಸವಾಗುತ್ತಿದ್ದು, ವನ್ಯಜೀವಿ ಛಾಯಾಗ್ರಹಣದಿಂದ ಹೆಚ್ಚಿನ ಆದಾಯಗಳಿಸುವವರು ಇದ್ದಾರೆ. ಸರ್ಕಾರದ ಮಟ್ಟದಲ್ಲಿ ದುಬಾರಿ ಬೆಲೆಯ ಕ್ಯಾಮರಾಗಳಿಗೆ ತೆರಿಗೆ ರಿಯಾಯಿತಿ ಕೊಡಿಸಲು ಪ್ರಯತ್ನಿಸಲಾಗುವುದು. ಸಂಘಕ್ಕೆ ನಿವೇಶನ ಹಾಗೂ ಫೋಟೋಗ್ರಾಫರ್‌ಗಳಿಗೆ ಸರ್ಕಾರದಿಂದ ಎಲ್ಲ ಸವಲತ್ತುಗಳನ್ನು ದೊರಕುವಂತೆ ಮಾಡಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ತಾಲೂಕಿನ ಆಲತ್ತೂರು ಗ್ರಾಮದ ಎ.ಎಂ.ಚೈತ್ರಾ ಹಾಗೂ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ಛಾಯಾಗ್ರಾಹಕರನ್ನು ಸನ್ಮಾನಿಸಲಾಯಿತು.

ಪುರಸಭೆ ಅಧ್ಯಕ್ಷ ಜಿ.ಎಸ್.ಮಧುಸೂಧನ್, ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಸರ್ಕಲ್ ಇನ್‌ಸ್ಪೆಕ್ಟರ್ ಜಯಕುಮಾರ್, ಕರ್ನಾಟಕ ಫೋಟೋಗ್ರಾಫರ್ಸ್ ಅಸೋಷಿಯೇಷನ್ ಅಧ್ಯಕ್ಷ ಎಚ್.ಎಸ್.ನಾಗೇಶ್, ಜಿಲ್ಲಾಧ್ಯಕ್ಷ ಮಂಜೇಶ್, ಗೌರವಾಧ್ಯಕ್ಷ ಗಣೇಶ್ ದೀಕ್ಷಿತ್, ತಾಲೂಕು ಅಧ್ಯಕ್ಷ ಟಿ.ಸಿ.ನಾಗೇಂದ್ರ, ಎಂ.ಎಸ್.ರಾಜೇಂದ್ರಕುಮಾರ್, ಗಿರಿಮಂಜು, ಶ್ರೀನಿಧಿ, ಶ್ರೀನಿವಾಸ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net