ಛಾಯಾಗ್ರಾಹಕರ ಬೇಡಿಕೆ ಈಡೇರಿಕೆಗೆ ಆಗ್ರಹ

BBGD 31-1
Published on

ಬಸವನಬಾಗೇವಾಡಿ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವೃತ್ತಿನಿರತ ಛಾಯಾಗ್ರಾಹಕರ ಜೀವನೋದ್ಧಾರಕ್ಕೆ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿ ಸ್ಥಳೀಯ ಬಸವ ಜನ್ಮಭೂಮಿ ವೃತ್ತಿನಿರತ ಛಾಯಾಚಿತ್ರ ಕಲಾವಿದರ ಒಕ್ಕೂಟದ ಪದಾಧಿಕಾರಿಗಳು ತಹಸೀಲ್ದಾರ್ ಎಂ.ಎನ್.ಬಳಿಗಾರ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಒಕ್ಕೂಟದ ಅಧ್ಯಕ್ಷ ಶಿವರುದ್ರಯ್ಯ ಹಿರೇಮಠ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವರಿಗೆ ಪ್ಯಾಕೇಜ್ ಘೋಷಿಸಿ ಆರ್ಥಿಕ ಪೊ್ರೀೀತ್ಸಾಹ ನೀಡಿವೆ. ಆದರೆ, ವೃತ್ತಿಪರ ಛಾಯಾಗ್ರಾಹಕರನ್ನು ನಿರ್ಲಕ್ಷಿಸಿವೆ.ಕೂಡಲೇ ಛಾಯಾಗ್ರಾಹಕರಿಗೂ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಕಾರ್ಮಿಕ ಇಲಾಖೆಯಿಂದ ವಿವಿಧ ಯೋಜನೆಗಳು ಹಾಗೂ ಸ್ಮಾರ್ಟ್ ಕಾರ್ಡ್ ಒದಗಿಸಬೇಕು. ಕರ್ನಾಟಕ ಛಾಯಾಗ್ರಹಣ ಅಕಾಡೆಮಿ ಸ್ಥಾಪನೆಗೊಳಿಸಿ ಛಾಯಾಗ್ರಾಹಕರಿಗೆ ನೆರವು ನೀಡಬೇಕು. ವೃತ್ತಿಪರ ಛಾಯಾಗ್ರಾಹಕರ ವ್ಯಾಪಾರದ ನೆರವಿಗೆ ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ಉಪಾಧ್ಯಕ್ಷ ಶ್ರೀಶೈಲ ಕೌಲಗಿ, ಸತೀಶ ಗಬ್ಬೂರ, ಸಂತೋಷ ಲಮಾಣಿ, ಮಹೇಶ ಪತ್ತಾರ, ಮಲ್ಲು ಹೊನವಾಡ, ಬಸವರಾಜ ಲಮಾಣಿ, ರಾಘು ಭಜಂತ್ರಿ, ಗಣೇಶ ಜಾಧವ, ಸಂತೋಷ ನಾಯನೇಗಲಿ, ರಾಮಕೃಷ್ಣ ಸಿದ್ಧಾಪೂರ, ಶಿವು ಎರಡೆತ್ತಿನ, ಶ್ರೀಕಾಂತ ಭಜಂತ್ರಿ, ಅನೀಲ ಸಕ್ರಿಮಠ, ಭೀಮು ಭಜಂತ್ರಿ, ಸಂಜು ಪವಾರ, ಹಣಮಂತ ಹ್ಯಾವಗಲ್ಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net