ಕ್ಯಾಮರಾ, ಲೆನ್ಸ್ ಕಳವು, ಸ್ನೇಹಿತರ ಮೇಲೇ ಅನುಮಾನ

camara
Published on

ಶಿವಮೊಗ್ಗ: ಮನೆಯಲ್ಲಿಟ್ಟಿದ್ದ ಲಕ್ಷಾಂತರ ರೂ. ಬೆಳೆಬಾಳುವ ಕ್ಯಾಮರಾ ಮತ್ತು ಲೆನ್ಸ್ ಕಳವು ಮಾಡಲಾಗಿದ್ದು ಛಾಯಾಗ್ರಾಹಕರೊಬ್ಬರು ತನ್ನ ಸ್ನೇಹಿತರ ಮೇಲೆ ಕಳ್ಳತನ ಆರೋಪ ಹೋರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬುದ್ಧನಗರ 2ನೇ ಕ್ರಾಸ್‌ನ ವಿಷ್ಣು ಕ್ಯಾಮರಾ ಮತ್ತು ಲೆನ್ಸ್ ಕಳೆದುಕೊಂಡವರು. ಅವರ ಸ್ನೇಹಿತರಾದ ಮಾಲ್ತೇಶ್, ರಾಮ್‌ಕುಮಾರ್, ಸುಮಂತ್ ಮತ್ತು ದೀಪಕ್ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ವಿಷ್ಣು, ಮಾಲ್ತೇಶ್ ಮತ್ತು ರಾಮ್‌ಕುಮಾರ್ ಒಟ್ಟಿಗೆ ವಾಸವಾಗಿದ್ದು ಹೊರಗೆ ಹೋಗುವಾಗ ಮೀಟರ್ ಬೋರ್ಡ್ ಮೇಲೆ ಮನೆ ಕೀ ಇಟ್ಟು ಹೋಗುತ್ತಿದ್ದರು. ಈ ವಿಚಾರ ಸುಮಂತ್ ಮತ್ತು ದೀಪಕ್‌ಗೂ ತಿಳಿದಿತ್ತು. ಮೀಟರ್ ಬೋರ್ಡ್ ಮೇಲೆ ಕೀ ಇಟ್ಟು ವಿಷ್ಣು ಹೊರಗೆ ಹೋಗಿದ್ದಾಗ ಮನೆಯಲ್ಲಿದ್ದ 2 ಲಕ್ಷ ರೂ. ಮೌಲ್ಯದ ಕ್ಯಾಮರಾ ಮತ್ತು ಲೆನ್ಸ್ ಕಳವು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net