ಛಾಯಾಚಿತ್ರಕಾರರ ವಿಡಿಯೋ ಚಿತ್ರಕಾರರ ನೂತನ ಸಂಘ ಉದ್ಘಾಟನೆ

Photographers assassination
Published on

ಕಾರವಾರ: ಛಾಯಾಗ್ರಹಣವೆಂಬ ಕಲೆ ಸಮಾಜದ ಪ್ರತಿಯೊಂದು ಕ್ಷಣವನ್ನು ಶಾಶ್ವತಗೊಳಿಸುವ ಶಕ್ತಿ ಹೊಂದಿದೆ ಎಂದು ಮಾಜಿ ರೂಪಾಲಿ ನಾಯ್ಕ ಹೇಳಿದರು.

ಬಾಡ ಶಿವಾಜಿ ಹಾಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾರವಾರ ತಾಲೂಕು ಛಾಯಾಚಿತ್ರಕಾರರ ವಿಡಿಯೋ ಚಿತ್ರಕಾರರ ಹಾಗೂ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಛಾಯಾಚಿತ್ರವು ಕೇವಲ ಹವ್ಯಾಸವಲ್ಲ. ಬದುಕಿನ ಹಾದಿಯೂ ಆಗಿದೆ. ಸಂಘಕ್ಕೆ ಬೇಕಾದ ಸಹಕಾರ ನೀಡಲಾಗುವುದು ಎಂದರು.

ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್, ಅರ್ಚಕ ವಿನಾಯಕ ಕೆ.ಜೋಶಿ, ಮಾತೋಶ್ರೀ ಸರೋಜಾ ಬಾಳಾ ದೇಸಾಯಿ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್ನ ಸಂಸ್ಥಾಪಕ ನರೇಂದ್ರ ದೇಸಾಯಿ, ಕಾರ್ಮಿಕ ನಿರೀಕ್ಷಕ ವೆಂಕಟೇಶಬಾಬು, ರವೀಂದ್ರ ಕಲಾ ವಿದ್ಯಾಲಯದ ನಿವೃತ್ತ ಉಪನ್ಯಾಸಕ ಜೋನ್, ಪರ್ಬತ್ ಎಸ್ ನಾಯ್ಕ ಇದ್ದರು.

186ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ 5 ವರ್ಷದೊಳಗಿನ ಮಕ್ಕಳಿಗಾಗಿ ಮುದ್ದು ಕೃಷ್ಣ ಸ್ಪರ್ಧೆ ಆಯೋಜಿಸಲಾಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಹಿರಿಯ ಛಾಯಾಗ್ರಾಹಕರಾದ ಬಸೀರ್ ದಾವೂದ ಶೇಖ ಸದಾಶಿವಗಡ, ರಾಜೇಶ ನಾಯ್ಕ ಸದಾಶಿವಗಡ, ಲಕ್ಷ್ಮೀಕಾಂತ ಮುರಾರಿ ರೇವಂಡಿಕರ ಕೋಡಿಬಾಗ, ಚೇತನ ದಿಲೀಪ ಬಾನಾವಳಿ ಸದಾಶಿವಗಡ ಹಾಗೂ ಶ್ರೀಕಾಂತ ಹರಿಶ್ಚಂದ್ರ ನಾಯ್ಕ ಉಳಗಾ ಅವರನ್ನು ಸನ್ಮಾನಿಸಲಾಯಿತು. ವನಿತಾ ರಾಜೇಶ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net