ಉತ್ತರ ಪಾಲಿಕೆಯಲ್ಲಿ ಪ್ರತಿ ಶುಕ್ರವಾರ ಫೋನ್ ಇನ್

Veerabhadreshwara Jatra festival begins today
Published on

ಬೆಂಗಳೂರು: ನಾಗರಿಕರೊಂದಿಗೆ ನೇರ ಸಂಪರ್ಕ ಸಾಧಿಸುವ ಉದ್ದೇಶದಿಂದ ಉತ್ತರ ನಗರ ಪಾಲಿಕೆಯ ಆಯುಕ್ತ ಪಿ. ಸುನೀಲ್ ಕುಮಾರ್ ಅವರು ಪ್ರತಿ ಶುಕ್ರವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಫೋನ್ ಇನ್ ಕಾರ್ಯಕ್ರಮ ನಡೆಸಲಿದ್ದಾರೆ.

ಮೊದಲ ಫೋನ್ ಇನ್ ಈ ತಿಂಗಳ 26 ರಿಂದ ಪ್ರಾರಂಭವಾಗಲಿದೆ. ಈ ವೇಳೆ ನಾಗರಿಕರು ರಸ್ತೆ ಗುಂಡಿ, ಬೀದಿ ದೀಪ ದುರಸ್ತಿ, ಕಸದ ಸಮಸ್ಯೆ, ಬೀದಿ ನಾಯಿಗಳ ಹಾವಳಿ, ಅಪಾಯಕಾರಿ ಮರ/ಕೊಂಬೆಗಳ ತೆರವು, ಪಾರ್ಕ್‌ಗಳ ನಿರ್ವಹಣೆ, ಚರಂಡಿಗಳ ಸ್ವಚ್ಛತೆ, ಅನಧಿಕೃತ ಬ್ಯಾನರ್ / ಪೋಸ್ಟರ್‌ಗಳ ತೆರವು, ಪಾದಚಾರಿ ಮಾರ್ಗದ ಒತ್ತುವರಿ, ಇ-ಖಾತಾ ಸಂಬಂಧಿತ ಸಮಸ್ಯೆಗಳ ಬಗ್ಗೆ ಅಹವಾಲು (ದೂ: 080-22975936 / 23636671) ಸಲ್ಲಿಸಬಹುದಾಗಿದೆ.

ಪ್ರತಿ ದೂರು ಸಹಾಯ 2.0 ಪೋರ್ಟಲ್‌ನಲ್ಲಿ ದಾಖಲಾಗಿ ಸಂಬಂಧಿಸಿದ ಅಧಿಕಾರಿಗೆ ರವಾನೆಯಾಗುವುದು. ನಾಗರಿಕರಿಗೆ ಎಸ್‌ಎಂಎಸ್ ಮೂಲಕ ದೂರು ಸ್ವೀಕೃತಿಯ ಮಾಹಿತಿ ಹಾಗೂ ಅಧಿಕಾರಿಯ ವಿವರ ಕಳುಹಿಸಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net