ಗಡೀಹಳ್ಳಿಯಲ್ಲಿ 12ಕ್ಕೆ ತತ್ವಪದಕಾರರ ಸಮ್ಮೇಳನ

suri srinivas
Published on

ಕಡೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಗಡೀಹಳ್ಳಿಯ ಶ್ರೀ ಕಾಳಿಕಾಂಬ ದೇವಾಲಯ ಸಮಿತಿ ಸಹಯೋಗದಲ್ಲಿ ಅಜ್ಜಂಪುರ ತಾಲ್ಲೂಕಿನ ಗಡೀಹಳ್ಳಿಯಲ್ಲಿ ಅ.12ರಂದು ಜಿಲ್ಲಾಮಟ್ಟದ ತತ್ವಪದಕಾರರ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್‌ತಿಳಿಸಿದರು. ತತ್ವಪದಕಾರರ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಜಿ.ಎಲ್.ಮಂಜುನಾಥ್ ಮಾತನಾಡಿ, ಸಮ್ಮೇಳನದಲ್ಲಿ ಜಿಲ್ಲೆಯ ಭಜನಾ ತಂಡಗಳಿಂದ ಸ್ಪರ್ಧೆ ನಡೆಯಲಿದೆ ಪ್ರಥಮ ಎಂದು ತಿಳಿಸಿದರು.
ಶ್ರೀಕಾಳಿಕಾಂಬ ದೇವಾಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಚಂದ್ರಶೇಖರಾಚಾರ್, ಗೌರವ ಕೋಶಾಧ್ಯಕ್ಷ ಯರದಕೆರೆ ಬಿ.ಪ್ರಕಾಶ್, ಗೌರವ ಸಲಹೆಗಾರ ಮಂಜಪ್ಪ, ಜಿಲ್ಲಾ ಸಂಚಾಲಕ ಚಿಕ್ಕನಲ್ಲೂರು ಪರಮೇಶ್, ತಾಲೂಕು ಅಧ್ಯಕ್ಷ ರವಿ ದಳವಾಯಿ,ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಮಧು. ಕಸಾಪ ಸದಸ್ಯರಾದ ಕಾಟಿಗನೆರೆ ಸತೀಶ್, ತಿಮ್ಮಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net