ಮಹನೀಯರ ಫೋಟೋ ತೆಗೆದದ್ದು ಖಂಡನೀಯ

dj clk manavi
Published on

ಚಳ್ಳಕೆರೆ: ತಾಲೂಕಿನ ಗೌರಸಮುದ್ರ ಗ್ರಾಪಂ ಕಾರ್ಯಾಲಯದಲ್ಲಿದ್ದ ದಾರ್ಶನಿಕ ನಾರಾಯಣಗುರು ಭಾವಚಿತ್ರವನ್ನು ಏಕಾಏಕಿ ತೆಗೆದಿರುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗುರುವಾರ ತಾಲೂಕು ಆರ್ಯ ಈಡಿಗರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ರೇಹಾನ್ ಪಾಷಾ ಅವರಿಗೆ ಮನವಿ ಸಲ್ಲಿಸಿದರು.

ಸಮಾಜ ಸುಧಾರಕರಿಗೆ ಸಮಾಜದಲ್ಲಿ ಗೌರವದಿಂದ ಕಾಣಬೇಕಿದೆ. ಸರ್ಕಾರಿ ಕಾರ್ಯಾಲಯಗಳಲ್ಲಿ ನಿಯಮ ಪಾಲನೆ ಆಗಬೇಕು.

ಪಂಚಾಯಿತಿ ಕಾರ್ಯಾಲಯದಲ್ಲಿ ನಾರಾಯಣಗುರು ಭಾವಚಿತ್ರವನ್ನು ಇರಿಸುವಂತೆ ತಾಲೂಕು ಆಡಳಿತ ಗ್ರಾಪಂಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಸಿ.ಒ.ರವಿಕುಮಾರ್, ಮುಖಂಡರಾದ ವೆಂಕಟೇಶ್, ಕೆ.ಜೆ.ಅಶೋಕ್‌ಕುಮಾರ್, ನೇತಾಜಿ ಪ್ರಸನ್ನ, ದೊಡ್ಡರಂಗಪ್ಪ, ಉಮೇಶ್, ಜಗದೀಶ್, ಬೇಕರಿ ವಿಜಯ್, ಮಧು, ಜಿ.ಎಚ್.ಪ್ರಕಾಶ್ ಇತರರಿದ್ದರು.

ಪೋಟೋ ಅಳವಡಿಕೆ: ತಹಸೀಲ್ದಾರ್ ಸೂಚನೆ ಮೇರೆಗೆ ಗೌರಸಮುದ್ರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಾರಾಯಣಗುರುವ ಅವರ ಭಾವಚಿತ್ರವನ್ನು ಮತ್ತೆ ಅಳವಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net