

ಕುಂದಾಪುರ: ನಾವು ಇತರರಿಗೆ ಪರೋಪಕಾರಿಗಳಾಗಬೇಕು. ಕಷ್ಟದಲ್ಲಿರುವರ ಭೇಟಿ ಮಾಡಬೇಕು. ಅವರ ಕಷ್ಟ ನೋಡಿ ಹಂಗಿಸದೆ, ಆಲಿಸಿ ಸಾಂತ್ವನ ನೀಡಬೇಕು ಹಾಗೂ ಸಹಾಯವಾಗಬೇಕು ಎಂದು ತ್ರಾಸಿ ಡಾನ್ ಬೋಸ್ಕೊ ಸಂಸ್ಥೆಯ ರೋಶಸ್ ಡಿಸೋಜ ಹೇಳಿದರು.
ಕುಂದಾಪುರ ರೋಜರಿ ಮಾತೆಯ ಇಗರ್ಜಿಯಲ್ಲಿ ಹೊಸ ವರ್ಷದ ಪ್ರಯುಕ್ತ ಕುಂದಾಪುರ ಚರ್ಚ್‌ನಲ್ಲಿ ಪವಿತ್ರ ಬಲಿದಾನ ಅರ್ಪಿಸಿ ಮಾತನಾಡಿದರು.
ಯೇಸು ಕ್ರಿಸ್ತರ 2025 ಜುಬಿಲಿ ಆಚರಣೆ ಕೈಪಿಡಿಯನ್ನು ಚರ್ಚ್ ಪ್ರಧಾನ ಧರ್ಮಗುರು ಪಾವ್ಲ್ ರೇಗೋ ಬಿಡುಗಡೆಗೊಳಿಸಿದರು. ಪಾಲನಾ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪಾಲನಾ ಮಂಡಳಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.