ಕೆ.ಕೆ.ಮುತ್ತಮ್ಮರಿಗೆ ಪಿಹೆಚ್‌ಡಿ ಪದವಿ

MUTHAMMA
Published on

ಮಡಿಕೇರಿ: ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಗಂಗೋತ್ರಿಯ ಸಮಾಜ ಶಾಸ್ತ್ರ ವಿಭಾಗದ ಸಂಶೋಧಕ ಕೊಡಗು ಜಿಲ್ಲೆಯ ಬೇಂಗೂರು ಗ್ರಾಮದ ಕೆ.ಕೆ.ಮುತ್ತಮ್ಮರವರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಸಮಾಜ ಶಾಸ್ತ್ರದಲ್ಲಿ ಪಿಹೆಚ್‌ಡಿ ಪದವಿ ನೀಡಿ ಗೌರವಿಸಿದೆ.


ಕೊಡಗು ಜಿಲ್ಲೆಯ ಯರವ ಬುಡಕಟ್ಟು ಜನಾಂಗದ ಬುಡಕಟ್ಟು ಮಹಿಳೆಯರ ಆರೋಗ್ಯ ಸ್ಥಿತಿ ಕುರಿತು ಮುತ್ತಮ್ಮರವರು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿಯ ಸಮಾಜ ಶಾಸ್ತ್ರ ವಿಭಾಗದ ಪ್ರೊ.ವಿನಯ್ ರಜತ್‌ರವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದರು. ಮುತ್ತಮ್ಮರವರು ಹೆಬ್ಬೆಟ್ಟಗೇರಿ ಗ್ರಾಮದ ದಿ.ಕೊಕ್ಕಲೇರ ಕಾಳಯ್ಯ ಹಾಗೂ ಕಾವೇರಿ ಕಾಳಯ್ಯ ಅವರ ಪುತ್ರಿ ಮತ್ತು ಬೇಂಗೂರು ಗ್ರಾಮದ ಪಟ್ಟಮಾಡ ಉದಯ್ ಮುತ್ತಣ್ಣರವರ ಪತ್ನಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net