

ಬೆಳಗಾವಿ: ಇಲ್ಲಿನ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಆರ್.ಎ.ಪರ್ವತೆ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ನಾಗನಗೌಡ ಪ್ರಭುಗೌಡ ಪಾಟೀಲ ಅರ್ಥಶಾಸ್ತ್ರ ವಿಷಯದಲ್ಲಿ ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪ್ರಧಾನ ಮಾಡಲಾಗಿದೆ.
ಹಂಪಿಯ ಕನ್ನಡ ವಿವಿ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ನಾಗನಗೌಡ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ತಿಪ್ಪಣ್ಣ ಬಸಪ್ಪ ಕೋಲಕಾರ ಮಾರ್ಗದರ್ಶನದಲ್ಲಿ ‘ಬೆಳಗಾವಿ ಕೈಗಾರಿಕಾ ವಸಾಹತು:ವಾಹನ ಬಿಡಿ ಭಾಗಗಳ ಘಟಕಗಳು’ ಕುರಿತಾಗಿ ಮಹಾ ಪ್ರಬಂಧವನ್ನು ಮಂಡಿಸಿದ್ದಾರೆ.