ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ

h2-tenginakai
Published on

ಹುಬ್ಬಳ್ಳಿ: ನಗರದ ವಾರ್ಡ್ ನಂ. 39ರ ಶಾಂತಿ ಕಾಲನಿಯ ಒಳ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಶಾಸಕ ಮಹೇಶ ಟೆಂಗಿನಕಾಯಿ ಶನಿವಾರ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಸೆಂಟ್ರಲ್ ಕ್ಷೇತ್ರದಲ್ಲಿ ಬರುವ ಎಲ್ಲ ವಾರ್ಡ್‌ಗಳಲ್ಲಿ ಹಂತ-ಹಂತವಾಗಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಶಾಂತಿ ಕಾಲನಿಯಲ್ಲಿ ರಸ್ತೆಗಳು ಹದಗೆಟ್ಟಿದ್ದು, ಮಹಾನಗರ ಪಾಲಿಕೆಯಿಂದ ಒಳ ರಸ್ತೆಗಳನ್ನು ಡಾಂಬರಿಕರಣ ಮಾಡುತ್ತಿದ್ದೇವೆ ಎಂದರು.
ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕರು, ಗುತ್ತಿಗೆದಾರರಿಗೆ ಸೂಚಿಸಿದರು.
ಪಾಲಿಕೆ ಸದಸ್ಯೆ ಸೀಮಾ ಸಿದ್ದು ಮೊಗಲಿಶೆಟ್ಟರ್, ವಕ್ತಾರ ರವಿ ನಾಯಕ, ಪ್ರಮುಖರಾದ ಸಿದ್ದು ಮೊಗಲಿಶೆಟ್ಟರ್, ಬಾಬು ಶೆಟ್ಟಿ, ರಘು ಧಾರವಾಡಕರ, ಮೋಹನ ಬಡಿಗೇರ, ಎಚ್.ಎಸ್. ಕಿರಣ, ಬಸವರಾಜ ಯಕಲಾಸಪೂರ, ಪ್ರಕಾಶ ಶೃಂಗೇರಿ, ಅರ್ಚನಾ ಕೆ., ಮಲ್ಲಿಕಾರ್ಜುನ ಕತ್ರಿಮಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net