ಅರ್ಹರೆಲ್ಲರಿಗೂ ಹಂತ,ಹಂತವಾಗಿ ಹಕ್ಕುಪತ್ರ ವಿತರಣೆ

CTD 21 MLA HAKKUPATRA (2)-02
Published on

ಚಿತ್ರದುರ್ಗ: ಕೊಳಗೇರಿ ಪ್ರದೇಶದಲ್ಲಿರುವ ಅರ್ಹ ಕುಟುಂಬಗಳಿಗೆ ಮತ್ತು ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿದ್ದವರಿಗೆ ಹಕ್ಕು ಪತ್ರ ವಿತರಿಸುವ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು. ನಗರದ ಜೋಗಿಮಟ್ಟಿ ರಸ್ತೆ 4ನೇ ಕ್ರಾಸ್ ಕೊಳಗೇರಿ ನಿವಾಸಿಗಳಿಗೆ ಮಂಗಳವಾರ ಹಕ್ಕು ಪತ್ರ ವಿತರಿಸಿದ ಮಾತನಾಡಿದ ಅವರು,ಇಲ್ಲಿಯ 156 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ.

ನಗರದಲ್ಲಿ ಅಂದಾಜು 12 ಸಾವಿರ ಕುಟುಂಬಗಳಿಗೆ ಹಂತ,ಹಂತವಾಗಿ ಹಕ್ಕು ಪತ್ರ ವಿತರಿಸಲಾಗುತ್ತಿದೆ. ಇದರಿಂದ 48-50 ಸಾವಿರ ಜ ನರಿಗೆ ಅನುಕೂಲವಾಗಿದೆ. ನಗರದಲ್ಲಿ 10-11 ಸಾವಿರ ಹಾಗೂ ಗ್ರಾಮೀಣ ಪ್ರದೇಶದಲ್ಲಿ 39 ಸಾವಿರ ಮನೆಗಳ ಮಂಜೂರಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ.

ಯಾರಿಗೂ ಅನ್ಯಾಯವಾಗದಂತೆ ಹಕ್ಕು ಪತ್ರ ವಿತರಿಸಲಾಗುತ್ತಿದೆ. ಒಂದು ವೇಳೆ ಯಾರಿಗಾದರೂ ಹಕ್ಕುಪತ್ರ ಸಿಗದೇ ಇದ್ದರೆ ನಗರ ಸಭೆ ಸದಸ್ಯರ ಗಮನಕ್ಕೆ ಅಥವಾ ತಮ್ಮ ಗಮನಕ್ಕೆ ತರುವಂತೆ ಮನವಿ ಮಾಡಿದ ಅವರು,ಚಿತ್ರದುರ್ಗ ಕ್ಷೇತ್ರವನ್ನು ಗುಡಿಸಲು ಮುಕ್ತ ಮಾಡಿದ್ದೇನೆ.

ನಗರದ ಹೊರ ವಲಯ ಮೆದೇಹಳ್ಳಿ ಬಳಿ ನೂರು ಕೋಟಿ ರೂ.ವೆಚ್ಚದಲ್ಲಿ ಜಿ ಪ್ಲಸ್3ಮಾದರಿ 1200 ಮನೆಗಳನ್ನು ನಿರ್ಮಿಸಲಾಗುತ್ತಿ ದೆ. ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿದ್ದ 170ಕ್ಕೂ ಹೆಚ್ಚು ಜನರಿಗೆ ಹಕ್ಕು ಪತ್ರ ಕೊಡಲಾಗಿದೆ ಎಂದರು. ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ,ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್,ಸದಸ್ಯರಾದ ಮಲ್ಲಿಕಾರ್ಜುನ್,ನಾಗಮ್ಮ,ಶ್ರೀನಿವಾಸ್,ಕುಡಾ ಸದಸ್ಯರಾದ ರೈತ ರಾಜು,ಕೃಷ್ಣ,ರಮೇಶ್‌ಆಚಾರ್,ಮುಖಂಡರಾದ ಮಂಜುನಾಥ್,ಮಹೇಶ್,ಹನುಮಂತ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net