

ವಿಜಯಪುರ: ಫಾರ್ಮಸಿ ಕ್ಷೇತ್ರದ ಪಿತಾಮಹ ಮಹಾದೇವ ಲಾಲ್ ಶ್ರೋಫ್ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸುವ ನಿಟ್ಟಿನಲ್ಲಿ ಅವರ ಜನ್ಮದಿನದಂದು ರಾಷ್ಟ್ರೀಯ ಫಾರ್ಮಸಿ ಶಿಣ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಸಹ ಪ್ರಾಧ್ಯಾಪಕ ಡಾ. ಶ್ರೀಧರ ಕುಮಾರ ಬಿರಾದಾರ ಹೇಳಿದರು.
ನಗರದ ಬಿಎಲ್ಡಿಇ ಸಂಸ್ಥೆಯ ಶ್ರೀ ಸಂಗನಬಸವ ಫಾರ್ಮಸಿ ಕಾಲೇಜು ಮತ್ತು ಸಂಶೋಧನೆ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಫಾಮ್ರ್ ಅನ್ವೇಷಣ&2025 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವನಬಾಗೇವಾಡಿಯ ಬಿಎಲ್ಡಿಇ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ. ಸಿ.ಸಿ. ಸಿಂಪಿ ಮಾತನಾಡಿ, ಫಾರ್ಮಸಿ ವಿದ್ಯಾರ್ಥಿಗಳು ಕೇವಲ ಶಿಕ ವೃತ್ತಿ, ಔಷಧ ಕಾರ್ಖಾನೆ ಹಾಗೂ ಸರ್ಕಾರದ ಇಲಾಖೆಗಳಲ್ಲಿ ಉದ್ಯೋಗ ಪಡೆಯುವ ಗುರಿ ಇರಿಸಿಕೊಳ್ಳದೆ ಸ್ವಂತ ಉದ್ಯಮಶೀಲತೆ ಹಾಗೂ ಸಂಶೋಧನೆ ಕಡೆಗೂ ಗಮನ ಹರಿಸಬೇಕೆಂದು ಸಲಹ ನೀಡಿದರು.
ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಶೆಟ್ಟಿ ಫಾರ್ಮಸಿ ಉದ್ಯಮದಲ್ಲಿರುವ ಅವಕಾಶಗಳ ಕುರಿತು ಮಾಹಿತಿ ನೀಡಿ, ಹೊಸ ಸ್ಟಾರ್ಟಪ್ ಪ್ರಾರಂಭಿಸಲು ವಿವಿಧ ತಂತ್ರಜ್ಞಾನಗಳ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.
ಫಾರ್ಮಾಕಾಲಜಿ ವಿಭಾಗದ ಮುಖ್ಯಸ್ಥ ಡಾ. ವಿ.ಪಿ. ಪಾಟೀಲ, ಕವಿತಾ ನೇಸೂರ, ರಾಣಿ ಭಂಡಾರಕವಟೆ, ರೇಣುಕಾ ಸುನಗದ, ಡಾ. ನಂಜಪ್ಪಯ್ಯ, ಕಾಲೇಜಿನ ಅಂದಾಜು 150 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.