

ನಾಯಕನಹಟ್ಟಿ: ವೈದ್ಯಕೀಯ ಕ್ಷೇತ್ರದಲ್ಲಿ ಹಗಲು-ರಾತ್ರಿ ನಿರಂತರವಾಗಿ ಶ್ರಮಿಸುವ ಫಾರ್ಮಸಿಸ್ಟ್‌ಗಳ ಸೇವೆ ಅನನ್ಯ ಮತ್ತು ಶ್ಲಾಘನೀಯ ಎಂದು ದಂತ ವೈದ್ಯಾಧಿಕಾರಿ ಡಾ.ಸಣ್ಣೋಬಣ್ಣ ಹೇಳಿದರು.
ಔಷಧ ಮಳಿಗೆಗಳ ಒಕ್ಕೂಟ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಶ್ವ ಫಾರ್ಮಸಿಸ್ಟ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೈದ್ಯಕೀಯ ಕ್ಷೇತ್ರದ ಅವಿಭಾಜ್ಯ ಅಂಗವಾಗಿ ಫಾರ್ಮಸಿ ವಿಭಾಗವು ಕಾರ್ಯನಿರ್ವಹಿಸುತ್ತಿದೆ. ಔಷಧಗಳ ಸಂಶೋಧನೆ, ತಯಾರಿಕೆ, ವಿತರಣೆ ಹೀಗೆ ಎಲ್ಲ ಹಂತಗಳಲ್ಲೂ ಔಷಧ ತಜ್ಷರು ಶ್ರಮಿಸುತ್ತಿದ್ದಾರೆ. ಜಗತ್ತಿನಲ್ಲಿ ಔಷಧ ತಜ್ಞರ ಕುರಿತು ಬಹುದೊಡ್ಡ ಇತಿಹಾಸವಿದೆ ಎಂದರು.
ರೋಗಗಳನ್ನು ಗುಣಪಡಿಸುವಲ್ಲಿ ವೈದ್ಯರ ಜತೆ ಔಷಧ ತಜ್ಞರು ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಶ್ವದಾದ್ಯಂತ ಕೋಟ್ಯಂತರ ಮಂದಿ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.
ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ್, ವೈದ್ಯಾಧಿಕಾರಿಕಾರಿಗಳಾದ ಡಾ.ಅಶೋಕ್, ಡಾ.ನಾಗರಾಜ್, ಔಷಧ ತಜ್ಞರಾದ ಕಾವ್ಯಾ ಗೌಡ, ಮೇಘನಾ, ಔಷಧ ಮಳಿಗೆಗಳ ಒಕ್ಕೂಟದ ಬಿ.ಟಿ.ರವಿಕುಮಾರ್, ನಾಗರಾಜ್, ವಾಸೀಂ ಅಹಮ್ಮದ್, ಜೆ.ಪಿ.ತಿಪ್ಪೇಸ್ವಾಮಿ, ವೀರೇಶ್, ಆಸ್ಪತ್ರೆ ಅಧೀಕ್ಷಕ ಮಲ್ಲಿಕಾರ್ಜುನಸ್ವಾಮಿ ಇದ್ದರು.