ಧಾರವಾಡ: ಸಂಶೋಧನಾ ಅಭ್ಯರ್ಥಿ ಸಂತೋಷಕುಮಾರ ಕಾಳಿಂಗಕುಮಾರ ಸತ್ಯಮೂರ್ತಿ ಅವರು ರಾಜ್ಯಶಾಸ್ತ್ರ ವಿಷಯದಲ್ಲಿ ಮಂಡಿಸಿದ `ಹನ್ನೆರಡನೆಯ ಶತಮಾನದ ವಚನಗಳಲ್ಲಿ ಸಾಮಾಜಿಕ ನ್ಯಾಯ ಮತ್ತು ಸಮಾನತೆ: ಒಂದು ತಾತ್ವಿಕ ವಿಶ್ಲೇಷಣೆ' ಮಹಾಪ್ರಬಂಧಕ್ಕೆ ನಗರದ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ. ಪ್ರದಾನ ಮಾಡಿದೆ. ಅವರಿಗೆ ಡಾ. ಬಿ.ಎಚ್. ಗುಜಲಾರ ಮಾರ್ಗದರ್ಶಕರಾಗಿದ್ದರು.