

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸತ್ತೂರ ನಿವಾಸಿ, ಶಿವಮೊಗ್ಗ ತಾಲೂಕು ಕೆಪಿಎಸ್ ಶೆಟ್ಟಿಹಳ್ಳಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ನಾಗವೇಣಿ ಟಿ.ಎಚ್. ಅವರು ದೈಹಿಕ ಶಿಕ್ಷಣ ವಿಷಯದಲ್ಲಿ ಮಂಡಿಸಿದ `ರಿಲೇಶನ್‌ಶಿಪ್ ಆಫ್ ಸೆಲೆಕ್ಟೆಡ್ ಅಂಥ್ರಪೋಮೆಟ್ರಿಕ್ ಆ್ಯಂಡ್ ಮೋಟರ್ ಫಿಟ್ನೆಸ್ ವೇರಿಯೆಬಲ್ಸ್ ಆಸ್ ಸ್ಕಿತ್ ಪರ್ಫಾರ್ಮೆನ್ಸ್ ಆಫ್ ಅಥ್ಲಿಟ್ಸ್ ಆಫ್ ಟ್ರ‍್ಯಾಕ್ ಆ್ಯಂಡ್' ಮಹಾಪ್ರಬಂಧಕ್ಕೆ ವಿಜಯಪುರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಪಿಎಚ್.ಡಿ ಪ್ರದಾನ ಮಾಡಿದೆ. ಅವರಿಗೆ ಡಾ. ಎನ್. ಚಂದ್ರಪ್ಪ ಮಾರ್ಗದರ್ಶಕರಾಗಿದ್ದರು.