

ಮಡಿಕೇರಿ: ಮಹಾರಾಜ, ತಾಂತ್ರಿಕ ಮಹಾವಿದ್ಯಾಲಯ, ಮೈಸೂರು(ಎಂಐಟಿ ಮೈಸೂರು) ವತಿಯಿಂದ ಆ.೩೦ ರಂದು ಗೋಣಿಕೊಪ್ಪದ ಕಾವೇರಿ ಕಾಲೇಜಿನಲ್ಲಿ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಆಯೋಜಿಸಿದೆ ಎಂದು ಕಾಲೇಜಿನ ಆಡಳಿತಾಧಿಕಾರಿ ಎ.ಎಂ.ಅನಿರುದ್ಧ್ ತಿಳಿಸಿದರು.
ಆಸಕ್ತ ವಿದ್ಯಾರ್ಥಿಗಳು ಅಂದು ಬೆಳಿಗ್ಗೆ ೧೦ ಗಂಟೆಗೆ ಪರೀಕ್ಷಾ ಸ್ಥಳಕ್ಕೆ ಆಗಮಿಸಬೇಕು. ಪೂರ್ವ ನೋಂದಣಿ ಕಡ್ಡಾಯವಾಗಿದ್ದು, ಎಂಸಿಎ ಆಕಾಂಕ್ಷಿಗಳು https://forms.gle/Ds3MU51BZNtrTu199 ಅಥವಾ ೯೬೨೦೨೨೮೧೦೭, ಎಂಬಿಎ ಆಕಾಂಕ್ಷಿಗಳು https://forms.gle/apV2u8jhCyj3t36X9 ಅಥವಾ ೯೮೮೬೪೧೪೧೪೪ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಂಸಿಎ ವಿಭಾಗದ ಮುಖ್ಯಸ್ಥ ಪಿ.ಮಂಜುನಾಥ್, ಪ್ರಮುಖರಾದ ಮೊಹಮ್ಮದ್ ಕೈಸರ್ ಉಪಸ್ಥಿತರಿದ್ದರು.