ಜಿಲ್ಲೆಗೆ ಪಿಎಫ್‌ಐ ಕಾರ್ಯಕರ್ತರ ಆಗಮನ ಕುರಿತು ಎಸ್‌ಪಿ ಸ್ಪಷ್ಟನೆ ನೀಡಬೇಕು; ಪಿಎಫ್‌ಐ ಒತ್ತಾಯ

60da193e-a470-4f2c-80dc-3378d42cdb6f
Published on


ಮಡಿಕೇರಿ: ಕೊಡಗಿಗೆ ಕೇರಳದಿಂದ ಬಹು ಸಂಖ್ಯೆಯಲ್ಲಿ ಪಿಎಫ್‌ಐ ಕಾರ್ಯಕರ್ತರು ಬಂದಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯ ಟಿ.ಎಚ್.ಅಬೂಬಕರ್ ಒತ್ತಾಯಿಸಿದರು.


ಪಿಎಫ್‌ಐ ವಿರುದ್ಧ ಇಂಥಹ ಕ್ಷುಲ್ಲಕ ಆರೋಪ ಮಾಡಲಾಗಿದೆ. ಕೊಡಗಿಗೆ ಕೇರಳದಿಂದ ಪಿಎಫ್‌ಐ ಕಾರ್ಯಕರ್ತರು ಬಂದರೆ ಇಲ್ಲಿಯವರೆಗೆ ಯಾಕೆ ಒಬ್ಬ ಕಾರ್ಯಕರ್ತನನ್ನು ಬಂಧಿಸಿಲ್ಲ. ಕೇರಳದಿಂದ ಬಂದವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದ ಅಬೂಬಕ್ಕರ್, ಯಾರದರೂ ಕೇರಳದಿಂದ ಬಂದಿದ್ದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟನೆ ನೀಡಬೇಕೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.


ಸುದ್ದಿಗೋಷ್ಠಿಯಲ್ಲಿ ಪಿಎಫ್‌ಐ ಜಿಲ್ಲಾಧ್ಯಕ್ಷ ಶೌಕತ್ ಆಲಿ, ಸದಸ್ಯ ಅಬ್ದುಲ್ ಜಲೀಲ್, ಮಡಿಕೇರಿ ನಗರ ಅಧ್ಯಕ್ಷ ರಿಯಾಜ್, ನಾಪೋಕ್ಲು ವಲಯಧ್ಯಕ್ಷ ಕೆ.ವೈ.ಅಶ್ರಫ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net